ನಗರಸಭೆ ಸದಸ್ಯನಿಗೆ ಪೊಲೀಸ್ ಅಧಿಕಾರಿಯಿಂದ ಜೀವ ಬೆದರಿಕೆ: ಆರೋಪ

Update: 2018-09-06 16:39 GMT
ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್

ಕೊಳ್ಳೇಗಾಲ,ಸೆ.6: ಬೆಂಗಳೂರಿನಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾನಂದರವರು ನನಗೆ ದೂರಾವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಗರಸಭೆ ಸದಸ್ಯ ಜಿ.ಪಿ.ಶಿವಕುಮಾರ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬುಧವಾರ ರಾತ್ರಿ ಪಟ್ಟಣದ ರೋಟರಿ ಭವನದಲ್ಲಿ ನಡೆದ ವಾರದ ಸಭೆ ಮುಕ್ತಾಯದ ಬಳಿಕ ಅವರು ತಮ್ಮ ಕಾರು ಚಾಲಕನ ಪೋನ್‍ನಿಂದ ನನಗೆ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೂ ಅಲ್ಲದೇ ಜೀವ ಬೆದರಿಕೆ  ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಟ್ಟಣದ ಪ್ರತಿಷ್ಠಿತ ಬಸಲಿಂಗಪ್ಪ ಕಾಲೇಜಿನ ಸಂಸ್ಥಾಪಕ ಲೇಟ್ ಕೃಷ್ಣಸ್ವಾಮಿರವರ ಪುತ್ರ ಮಹಾನಂದ ಅವರು ಪ್ರಸಕ್ತ ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ನನಗೆ ಜೀವ ಬೆದರಿಕೆ ಹಾಕಿರುತ್ತಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದಾರೆ.

ಶಿವಕುಮಾರ್ ವಿರುದ್ಧ ದೂರು

ಪಟ್ಟಣದ ರೊಟರಿ ಸಂಸ್ಥೆಯ ಅಧ್ಯಕ್ಷೆಯಾದ ನನ್ನನ್ನು ಮಹಿಳೆಯೆಂದು ಲೆಕ್ಕಿಸದೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ಮಹಾನಂದರವರ ತಾಯಿ ಪ್ರೇಮಲತಾರವರು ಪಟ್ಟಣ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ.

ರೊಟರಿ ಸಂಸ್ಥೆಯಲ್ಲಿ ಬುಧವಾರ ವಾರದ ಸಭೆಯಲ್ಲಿ ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಶಿವಕುಮಾರ್ ವೈಯಕ್ತಿಕ ದ್ವೇಷದಿಂದ ನನ್ನ ಮಗನ ಮೇಲೆ ಸುಳ್ಳು ದೂರು ಸಲ್ಲಿಸಿದ್ದಾರೆ. ಬಸಲಿಂಗಪ್ಪ ಕಾಲೇಜಿನ ಸಂಸ್ಥಾಪಕ ನನ್ನ ಪತಿ ದಿ.ಕೃಷ್ಣಸ್ವಾಮಿರವರ ಜಾತಿಯನ್ನು ನಿಂದಿಸಿ ನನಗೆ ಮತ್ತು ನನ್ನ ಮಗನನ್ನು ಕಥೆಯನ್ನು ಮುಗಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News