ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಧರಣಿ

Update: 2018-09-07 13:02 GMT

ದಾವಣಗೆರೆ,ಸೆ.7: ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ ಬಣದ ನೇತೃತ್ವದಲ್ಲಿ ರೈತರು ಚನ್ನಗಿರಿ ತಾ. ಸಂತೇಬೆನ್ನೂರು ನಾಡ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸಿದರು. 

ಸಂತೇಬೆನ್ನೂರು ಗ್ರಾಮದ ಪ್ರಮುಖ ವೃತ್ತದಿಂದ ನಾಡ ಕಚೇರಿವರೆಗೆ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ರೈತ ಮುಖಂಡರು, ಸಂತೇಬೆನ್ನೂರು ಹೋಬಳಿಯ ಬಗರ್‍ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ನಾಡ ಕಚೇರಿಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ನಾಡ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಇದಕ್ಕೆಲ್ಲಾ ಅವಕಾಶ ನೀಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಅರಸಿನಹಾಳ್ ಸಿದ್ದಪ್ಪ, ಎಸ್.ಆರ್. ರವಿಕುಮಾರ ಯಲೋದಹಳ್ಳಿ, ಮಲ್ಲಿಗೆರೆ ಪ್ರಕಾಶ, ಉಪ ನಾಯಕನಹಳ್ಳಿ ಉಮೇಶ, ಬಸವರಾಜ ಗುಮ್ಮನೂರು, ಲೋಕೇಶ ನಾಯ್ಕ, ಅಸ್ತಾಪನಹಳ್ಳಿ ಶರಣಪ್ಪ, ರುದ್ರಾಪುರ ಶಿವಣ್ಣ, ಮಲ್ಲಿಗೇನಹಳ್ಳಿ ಹನುಮಂತ, ವೆಂಕಟೇಶ, ದೊಡ್ಡಮಲ್ಲಾಪುರ ಕರಿಬಸಪ್ಪ, ಸೋಮಣ್ಣ, ಶಿವಣ್ಣ, ಪರಶುರಾಮಪ್ಪ, ಲೋಕೇಶ, ಸಿ.ಕೆ.ರಂಗಸ್ವಾಮಿ, ಎ.ಎಸ್.ನಾಗರಾಜ, ಎಂ.ಬಸಪ್ಪ, ಎಂ. ಆನಂದಪ್ಪ, ಕೆ.ಎಚ್.ನಾಗಪ್ಪ, ಚಿಕ್ಕಕೋಗಲೂರು ಮಂಜುನಾಥ, ಸಿ.ಎಚ್.ಅಶೋಕ, ಹಾಲೇಶಪ್ಪ, ಲೋಕೇಶಪ್ಪ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News