ಸುಂಟಿಕೊಪ್ಪ: ಅಕ್ರಮ ದಾಸ್ತಾನು ಮಾಡಿದ್ದ ನಿರಾಶ್ರಿತರಿಗೆ ವಿತರಿಸಬೇಕಾದ ಸಾಮಾಗ್ರಿಗಳ ವಶ

Update: 2018-09-07 13:11 GMT

ಸುಂಟಿಕೊಪ್ಪ,ಸೆ.07: ಅತಿವೃಷ್ಠಿಯಿಂದ ಮನೆ ಆಸ್ತಿ ಕಳೆದುಕೊಂಡ ನಿರಾಶ್ರಿತರಿಗೆ ವಿತರಿಸಬೇಕಾದ ಅಕ್ಕಿ ಇತರೆ ಸಾಮಾಗ್ರಿಗಳನ್ನು ಹರದೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬಂಧುಗಳ ಮನೆಯಲ್ಲಿ ಶೇಖರಿಸಿಟ್ಟಿದನ್ನು ಸೋಮವಾರ ಪೇಟೆ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ವಶಪಡಿಸಿಕೊಂಡು ಕುಶಾಲನಗರ ಆರ್‍ಎಂಸಿ ಗೋದಾಮಿಗೆ ಸಾಗಿಸಿದ್ದಾರೆ. 

ಹರದೂರು ಗ್ರಾಮ ಪಂಚಾಯತ್ ಸದಸ್ಯ ಗೌತಮ್ ಶಿವಪ್ಪ ಅವರು ತಮ್ಮ ಅತ್ತೆ ಮನೆಯಲ್ಲಿ ಅಕ್ರಮವಾಗಿ ನಿರಾಶ್ರಿತರಿಗೆ ನೀಡಬೇಕಾದ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ, ಸೋಪು, ರಾಗಿ ಪುಡಿ, ಎಣ್ಣೆ ಮತ್ತು ಇತರ ವಸ್ತುಗಳು ತುಂಬಿದ ಸುಮಾರು 60 ಚೀಲಗಳನ್ನು ದಾಸ್ತಾನಿರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇಂದು ಆ ಸಾಮಾಗ್ರಿಗಳನ್ನು ಕುಶಾಲನಗರ ಆರ್‍ಎಂಸಿ ಗೋದಾಮಿಗೆ ಸಾಗಿಸಲಾಗಿದ್ದು, ಅದನ್ನು ಜಲಪ್ರಳಯದಿಂದ ಎಲ್ಲವನ್ನು ಕಳೆದುಕೊಂಡ ನಿರಾಶ್ರಿತರಿಗೆ ಹಂಚಲಾಗುವುದೆಂದು ಸೋಮವಾರ ಪೇಟೆ ತಹಶೀಲ್ದಾರ್ ಮಹೇಶ್ ಹಾಗೂ ಕಂದಾಯ ಪರಿವೀಕ್ಷಕ ಶಿವಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News