ಪ್ರಧಾನಿಗೆ ಡಾಮ್ ಮೊರೇಸ್ ಪುಸ್ತಕ ಉಡುಗೊರೆ ನೀಡಿದ ಸಿಎಂ ಕುಮಾರಸ್ವಾಮಿ

Update: 2018-09-10 11:53 GMT

ಹೊಸದಿಲ್ಲಿ, ಸೆ.10: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಪ್ರಧಾನ ಮಂತ್ರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಖ್ಯಾತ ಪ್ರವಾಸಿ ಲೇಖಕ ಡಾಮ್ ಮೊರೇಸ್ ಅವರು ಬರೆದ “ದಿ ಓಪನ್ ಐಸ್: ಎ ಜರ್ನಿ ಥ್ರೂ ಕರ್ನಾಟಕ” ಎಂಬ ವಿಶಿಷ್ಟ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಕರ್ನಾಟಕ ಸರ್ಕಾರದ ಪರವಾಗಿ ವಾರ್ತಾ ಇಲಾಖೆಯು ಈ ಪುಸ್ತಕವನ್ನು 1976ರಲ್ಲಿ ಪ್ರಕಟಿಸಿತ್ತು. ಇದರ ಲೇಖಕ ಡಾಮ್ ಮೊರೇಸ್ ಭಾರತದ ಪ್ರತಿಭಾನ್ವಿತ ಕವಿ, ಅಂಕಣಕಾರ ಹಾಗೂ ಪ್ರವಾಸಿ ಲೇಖಕರಾಗಿದ್ದರು. ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಈ ಕೃತಿಗೆ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಹಾಗೂ ಚಿತ್ರ ಕಲಾವಿದ ಪದ್ಮಭೂಷಣ ಮಾರಿಯೋ ಮಿರಾಂಡ ಅವರು ಚಿತ್ರಗಳನ್ನು ಒದಗಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News