​ಮಗಳ ವಿದ್ಯಾಭ್ಯಾಸ ಸಹಾಯಕ್ಕೆ 12 ಸೇವಕರು !

Update: 2018-09-12 03:33 GMT

ಲಂಡನ್, ಸೆ. 12: ಸ್ಕಾಟ್ಲೆಂಡ್ ಸಂತ ಆ್ಯಂಡ್ರೂಸ್ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷದ ಪದವಿ ಕೋರ್ಸ್‌ಗೆ ಸೇರಿದ ಮಗಳ ಸಹಾಯಕ್ಕಾಗಿ ಹನ್ನೆರಡು ಮಂದಿಯನ್ನು ಭಾರತೀಯ ಮೂಲದ ಕೋಟ್ಯಧಿಪತಿಯೊಬ್ಬರು ನೇಮಕ ಮಾಡಿಕೊಂಡಿರುವ ಕುತೂಹಲಕರ ಘಟನೆ ಬೆಳಕಿಗೆ ಬಂದಿದೆ.

ಸಿಲ್ವರ್ ಸ್ವ್ಯಾನ್ ರಿಕ್ರೂಟ್‌ಮೆಂಟ್ ಎಂಬ ಸಂಸ್ಥೆ ಈ ಸಂಬಂಧ ಜಾಹೀರಾತು ನೀಡಿದೆ. "ಶ್ರೀಮಂತ ಭಾರತೀಯ ಕುಟುಂಬವೊಂದು ತನ್ನ ಮಗಳ ಸಹಾಯಕ್ಕಾಗಿ ಒಬ್ಬ ಬಟ್ಲರ್, ಗಾರ್ಡನರ್, ಮೂವರು ಹೌಸ್‌ಕೀಪರ್, ಹೌಸ್ ಮ್ಯಾನೇಜರ್, ಮಹಿಳಾ ಸಹಾಯಕಿ, ಚಾಲಕ, ಶೆಫ್ ಹಾಗೂ ಮೂವರು ಸೇವಕರನ್ನು ನೇಮಕ ಮಾಡಿಕೊಳ್ಳಲಿದೆ. ಹತ್ತಿರದ ಮ್ಯಾನ್ಷನ್‌ಗಳಲ್ಲಿ ಅವರ ವಸತಿಗೆ ಅವಕಾಶವಿದೆ" ಎಂದು ಜಾಹೀರಾತು ಹೇಳುತ್ತದೆ.

ಮಹಿಳಾ ಸಹಾಯಕಿಯ ಕೆಲಸದ ವಿವರಣೆಯಲ್ಲಿ, "ಲವಲವಿಕೆಯ ಮತ್ತು ಉತ್ಸಾಹಿ ತರುಣಿಯ ಕೆಲಸ ಎಬ್ಬಿಸುವುದು, ದಿನನಿತ್ಯದ ಕಾರ್ಯಚಟುವಟಿಕೆಯ ವೇಳಾಪಟ್ಟಿ ಸಿದ್ಧಪಡಿಸುವ ಬಗ್ಗೆ ಇತರ ಸಿಬ್ಬಂದಿ ಜತೆ ಸಮನ್ವಯ ಸಾಧಿಸುವುದು, ಪಾಲನೆಗೆ ನೆರವಾಗುವುದು, ವಾರ್ಡ್‌ರೋಬ್ ನಿರ್ವಹಣೆ ಮತ್ತು ಖಾಸಗಿ ಶಾಪಿಂಗ್"

ಸೇವಕರ ಕೆಲಸವೆಂದರೆ ಊಟ ಬಡಿಸುವುದು, ಟೇಬಲ್ ವ್ಯವಸ್ಥೆಗೊಳಿಸುವುದು ಮತ್ತು ಮನೆ ಸ್ವಚ್ಛಗೊಳಿಸುವುದು. ಸಾಧ್ಯವಿರುವ ಕಡೆಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದೂ ಜಾಹೀರಾತು ಹೇಳಿದೆ.

ವಾರ್ಷಿಕ 28 ಲಕ್ಷ ರೂಪಾಯಿ (30 ಸಾವಿರ ಪೌಂಡ್) ವೇತನ ನಿಗದಿಪಡಿಸಲಾಗಿದೆ. ಕುಟುಂಬದ ಇತರ ಸದಸ್ಯರು ಅಪರೂಪಕ್ಕೆ ಬರುತ್ತಾರೆ ಎಂದೂ ಜಾಹೀರಾತು ಹೇಳಿದೆ.

ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿನಿಯರು ಮೊದಲ ವರ್ಷದ ಶಿಕ್ಷಣದ ಅವಧಿಯಲ್ಲಿ ವಾಸದ ಹಾಲ್‌ನಲ್ಲಿ ವಾಸ್ತವ್ಯ ಇರುತ್ತಾರೆ. ಬಳಿಕ ಮಿತವ್ಯಯದ ಬಜೆಟ್‌ನಲ್ಲಿ ಮನೆ ಹಂಚಿಕೆ ಆಧಾರದಲ್ಲಿ ಜೀವನ ಸಾಗಿಸುತ್ತಾರೆ. ಆದರೆ ಈ ಐಷಾರಾಮಿ ವಾಸಕ್ಕೆ ವಿಶ್ವವಿದ್ಯಾನಿಲಯ ಯಾವುದೇ ಆಕ್ಷೇಪ ಮಾಡುವುದಿಲ್ಲ. ಅದು ಆಯಾ ವಿದ್ಯಾರ್ಥಿಗಳ ಖಾಸಗಿ ವಿಷಯ ಎಂದು ವಿಶ್ವವಿದ್ಯಾನಿಲಯ ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News