ಕಾರ್ಮಿಕರು ಗುಣಮಟ್ಟದ ಕೆಲಸ ಮಾಡುವ ಮೂಲಕ ಎಲ್ಲರ ಪ್ರೀತಿಗಳಿಸಿ: ಮೈಸೂರು ಜಿಲ್ಲಾಧಿಕಾರಿ ಜಿ.ಶಂಕರ್

Update: 2018-09-12 15:20 GMT

ಮೈಸೂರು,ಸೆ.12: ಕಾರ್ಮಿಕರು ಗುಣಮಟ್ಟದ ಕೆಲಸಗಳನ್ನು ಮಾಡುವ ಮೂಲಕ ಎಲ್ಲರ ಪ್ರೀತಿಗಳಿಸಿ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕಾರ್ಮಿಕರಿಗೆ ಸಲಹೆ ನೀಡಿದರು.

ಮೈಸೂರು ನಿರ್ಮಿತಿ ಕೇಂದ್ರದಲ್ಲಿ ಬುಧವಾರ ನಿರ್ಮಿತಿ ಕೇಂದ್ರ ಮತ್ತು ಕಾರ್ಮಿಕ ಇಲಾಖೆ ಮೈಸೂರು ಇವರ ಸಹಯೋಗದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿಯಲ್ಲಿ ಶ್ರಮ ಸಾಮರ್ಥ್ಯ ಯೋಜನೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಾರ್ಮಿಕರು ತರಬೇತಿ ಪಡೆಯಬೇಕು. ತರಬೇತಿ ಪಡೆಯುವ ಅವಧಿಯಲ್ಲಿ ಏನು ಕೂಲಿ ನಷ್ಟವಾಗಲಿದೆಯೋ ಆ ಕೂಲಿ ನಷ್ಟಕ್ಕೆ ಸ್ಟೈಫಂಡ್ ಸಿಗಲಿದೆ. ಊಟ, ಇತ್ಯಾದಿ ವ್ಯವಸ್ಥೆಯನ್ನೂ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಎಲೆಕ್ಟ್ರಿಕ್, ಪ್ಲಂಬಿಂಗ್ ಅದಕ್ಕೆ ಸಂಬಂಧಪಟ್ಟಂತೆ ಟೂಲ್ ಕಿಟ್ ಗಳನ್ನಿಡಲಾಗಿದೆ. ಐದು ಸಾವಿರ ಬೆಲೆಬಾಳುವ ಟೂಲ್ ಕಿಟ್ ಇದೆ. ತರಬೇತಿ ಮುಗಿಸಿದ ನಂತರ ದೊರೆಯಲಿದೆ. ತರಬೇತಿ ಪಡೆದರೆ ನಿಮ್ಮ ಮೌಲ್ಯ ಹೆಚ್ಚಲಿದೆ. ಸ್ವಂತ ಟೂಲ್ ಕಿಟ್ ಕೂಡ ಇರಲಿದೆ ಎಂದು ತಿಳಿಸಿದರು. 

ಲೋಕಲ್ ಐಟಮ್ಸ್ ಇಟ್ಕೊಂಡು ಕೆಲಸ ಮಾಡೋದಕ್ಕಿಂತ ಕ್ವಾಂಟಿಟಿ ಇಂಟರ್ ನ್ಯಾಷನಲ್ ಪ್ರಾಡಕ್ಟ್ ಇಟ್ಟುಕೊಂಡು ನೀವು ನಿಮ್ಮ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದು. ಮೈಸೂರು ಕೂಡ ಬೆಂಗಳೂರಿನಂತೆ ಬೆಳೆಯುತ್ತಿದೆ. ಕಾರ್ಮಿಕರ ಅಗತ್ಯತೆ ತುಂಬಾ ಇದೆ. ಹೂಟಗಳ್ಳಿ, ವಿಜಯನಗರ, ಬೋಗಾದಿ ಸೇರಿದಂತೆ ಹಲವೆಡೆ ಮನೆಗಳು ಹೆಚ್ಚುತ್ತಿವೆ. ಹೊಸ ಕಂಪನಿಗಳು ಬರುತ್ತಿವೆ. ಹೋಟೆಲ್ ಉದ್ಯಮ ಬೆಳೆಯುತ್ತಿದೆ. ಇಂತಹ ಕೆಲಸಗಾರರ ಅಗತ್ಯವಿದೆ. ಕ್ವಾಂಟಿಟಿ ವರ್ಕರ್ ಆಗಿದ್ದರೆ ಗುಣಮಟ್ಟದ ಕೆಲಸ ಮಾಡಬೇಕು. ನೋಂದಣಿ  ಆಗಿರುವವರಿಗೆ ನಾವೇ ತರಬೇತಿ ನೀಡುತ್ತೇವೆ. ಕೆಲವರು ನೋಂದಣಿ ಅಗದವರು ಇರುತ್ತಾರೆ. ಅವರಿಗೆ ನೀವು ಕಲಿಸಬಹುದು. ನೀವೂ ಕೂಡ ತರಬೇತಿದಾರರಾಗಬಹುದು. ಅವರೂ ಕೂಡ ಬದುಕು ಕಟ್ಟಿಕೊಳ್ಳಲು ಒಂದು ಬುನಾದಿಯಾಗಲಿದೆ. ಒಳ್ಳೆಯ ರೀತಿಯಲ್ಲಿ ಕ್ವಾಲಿಟಿ ವರ್ಕ್ ಮಾಡಿ ಎಂದರಲ್ಲದೇ, ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯ ತಿಳಿಸಿದರು.

ಈ ಸಂದರ್ಭ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ರಾವ್ ಕುಲಕರ್ಣಿ, ಸಹಾಯಕ ಕಾರ್ಮಿಕ ಆಯುಕ್ತ ತಮ್ಮಣ್ಣ, ಮೈಸೂರು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಂ.ಟಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News