ಬೀರೂರು: ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ವಿತರಣೆ

Update: 2018-09-12 17:00 GMT

ಬೀರೂರು, ಸೆ.12: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿಕ್ಕಮಗಳೂರು ಜಿಲ್ಲಾ ಶಾಖಾ ವತಿಯಿಂದ ಮಂಗಳವಾರ ಆಯ್ದ ಪತ್ರಕರ್ತರಿಗೆ ಖಾಸಗಿ ಬಸ್ ಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್‍ಗಳನ್ನು ವಿತರಿಸಲಾಯಿತು.

ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ಬಸ್ ಪಾಸ್ ಗಳನ್ನು ನೀಡಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಶರತ್, ಪ್ರಜಾಪ್ರಭುತ್ವದ ಕಾವಲುಗಾರರಂತೆ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗುವಂತಾಗಬೇಕು. ದಿನದ 24 ಗಂಟೆಯು ಶ್ರಮಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸಿಕೊಟುವಲ್ಲಿ ಸರ್ಕಾರಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.

ಪುರಸಭಾ ಸದಸ್ಯ ಮಾರ್ಗದ ಮಧು ಮಾತನಾಡಿ, ಜಿಲ್ಲೆಯ ಪತ್ರಿಕಾರಂಗ ಹಲವು ಉತ್ತಮ ವರದಿಗಳನ್ನು ಪ್ರಕಟಿಸುವ ಮೂಲಕ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ಸಮಸ್ಯೆಗಳ ಪರಿಹಾರಕ್ಕೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದೆ. ಇಂದು ಅವರಿಗೆ ಅನುಕೂಲವಾಗುವಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬಸ್ ಪಾಸ್ ವಿತರಿಸುತ್ತಿದೆ. ಸರ್ಕಾರಿ ಬಸ್ ಗಳಲ್ಲಿಯೂ ಇಂತಹ ಸೌಲಭ್ಯ ಸಿಗುವಂತಾಗಲಿ ಎಂದು ಆಶಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷ ಟಿ.ಎನ್.ಎ.ಮೊದಲಿಯಾರ್ ಮಾತನಾಡಿ, ಜಿಲ್ಲೆಯ ಪತ್ರಕರ್ತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ನಿವೇಶನ ರಹಿತ ಪತ್ರಕರ್ತರಿಗೆ ಸರ್ಕಾರದಿಂದ ಉಚಿತ ನಿವೇಶನ ಕೊಡಿಸಲು ಪ್ರಯತ್ನಿಸಲಾಗುವುದು. ಸಿದ್ದರಾಮೆಶ್ವರ ಮೋಟಾರ್ ಸರ್ವಿಸ್‍ನ ವ್ಯವಸ್ಥಾಪಕರು ಸಮಾಜ ಸೇವೆ ಸಲ್ಲಿಸುವ ಪತ್ರಕರ್ತರ ನೋವು ನಲಿವಿಗೆ ಸ್ಪಂದಿಸಿ ಉಚಿತ ಬಸ್ ಪಾಸ್ ನೀಡಿರುವುದು ಶ್ಲಾಘನೀಯ ಎಂದರು.

ಪುರಸಭಾ ಸದಸ್ಯ ಶಶಿಧರ್, ರಾಷ್ಟ್ರೀಯ ಮಂಡಳಿ ಸದಸ್ಯ ಅಜ್ಜಂಪುರ ಪ್ರಕಾಶ್, ಜಿಲ್ಲಾ ಮಾಜಿ ಉಪಾಧ್ಯಕ್ಷ ಕೆ.ಜಿ.ಲೋಕೆಶ್ವರ್, ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣಪ್ಪ, ರಮೇಶ್, ಬುಧಪರ್ವ ಶಿವಣ್ಣ, ಐಸಿರಿ ಹರ್ಷ, ವಿನಯ್ ಕುಮಾರ್, ದೇವರಾಜ್, ಅಜ್ಜಂಪುರ ಮಂಜುನಾಥ್, ಬಿ.ಡಿ.ರಮೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News