ಗಾಳಿಯಲ್ಲಿ ಗುಂಡು ಹೊಡೆಯುವ ಬಿಜೆಪಿ: ಎಂ.ಬಿ ಪಾಟೀಲ್ ವ್ಯಂಗ್ಯ

Update: 2018-09-13 12:42 GMT

ಬೆಂಗಳೂರು, ಸೆ.13: ಬಿಜೆಪಿ ಜೊತೆ ಕಾಂಗ್ರೆಸ್ಸಿನ 14 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಸುಳ್ಳಾಗಿದ್ದು, ಬಿಜೆಪಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು. 

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಳಿಯು ಬಿಜೆಪಿಯ ಏಳೆಂಟು ಶಾಸಕರು ಸಂಪರ್ಕದಲ್ಲಿದ್ದಾರೆ. ಆದರೆ, ಬಿಜೆಪಿ ಸಂಪರ್ಕದಲ್ಲಿ ಯಾರಿದ್ದಾರೆ ಎಂದು ಬಹಿರಂಗ ಮಾಡಬೇಕು ಎಂದರು.

ನನ್ನನ್ನು ಯಾವ ಬಿಜೆಪಿ ನಾಯಕರೂ ಸಂಪರ್ಕ ಮಾಡಿಲ್ಲ ಎಂದ ಅವರು, ಎಲ್ಲ 78 ಶಾಸಕರು ಅರ್ಹತೆ ಇರುವವರೆ. ಯಾರನ್ನು ಆಯ್ಕೆ ಮಾಡಬೇಕೆಂದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟದ್ದು ಎಂದು ತಿಳಿಸಿದರು.

ಬೆಳಗಾವಿ ಸಮಸ್ಯೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಸಣ್ಣ-ಪುಟ್ಟ ಸಮಸ್ಯೆಗಳು ಇವೆ. ಇವುಗಳನ್ನು ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಪಡಿಸುತ್ತಾರೆ. ಇವತ್ತು ಅಥವಾ ನಾಳೆ ಕೆಪಿಸಿಸಿ ಅಧ್ಯಕ್ಷರು ಮತ್ತು ಜಾರಕಿಹೊಳಿ ಸಹೋದರರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಪಾಟೀಲ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News