ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

Update: 2018-09-14 18:25 GMT

ಹನೂರು,ಸೆ.14: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ರೈತಾಪಿ ವರ್ಗದ ಅನುಕೂಲತೆಗೆ ತಕ್ಕಂತೆ ಮತ್ತು ಅವರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲು ಸಂಘದ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ ಎಂದು ಸಂಘದ ಅಧ್ಯಕ್ಷ ಪಿ.ಜಯಕುಮಾರ್ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಹುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸಂಘದ ಆವರಣದಲ್ಲಿ ಆಯೋಜಿಸಿಲಾಗಿತ್ತು ಈ ಸಭೆಯ ಪ್ರಾರಂಭದಲ್ಲಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಡಿ.ನೀಲಿಸಿದ್ದಪ್ಪ ಪ್ರಸ್ತುತ ಆರ್ಥಿಕ ವರ್ಷದ ವ್ಯವಹಾರಗಳು, ಸಂಘದ ರೂಪರೇಷಗಳು  ಮಂಡಿಸಿದರಲ್ಲದೆ, ಮುಂದಿನ ಆರ್ಥಿಕ ವರ್ಷದ ಬಜೆಟ್‍ನ್ನು ಸಹ ಮಂಡಿಸಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಗ್ರಾಮಾಂತರ ಭಾಗದಲ್ಲಿ  ಕೃಷಿ ಚಟುವಟಿಕೆಗಳಲ್ಲಿ ಸದಾ ತೋಡಗಿಸಿಕೂಂಡಿರುವ ರೈತರ ಏಳ್ಗೆಗಾಗಿ ಕೃಷಿ ಪತ್ತಿನ ಸಹಕಾರ ಸಂಘಗಳು ಸದಾ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಂಘದ ಸರ್ವ ಸದಸ್ಯರು ಇದೇ ರೀತಿಯ ಸಹಕಾರ ನೀಡಿದರೆ ಇನ್ನಷ್ಟು ಲಾಭದಾಯಕವಾಗಿ ಮುನ್ನಡೆಸಲು ಸಾಧ್ಯ ಎಂದರು.

ಸಭೆಯಲ್ಲಿ ಕೆಲ ಲೋಪದೋಷಗಳನ್ನು ನೆರೆದಿದ್ದ ಸದಸ್ಯರು ಪ್ರಸ್ತಾಪಿಸಿದಾಗ ಸಂಘದ ಅಧ್ಯಕ್ಷರು ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ನೀಡಿ ಸಮಸ್ಯೆಗಳನ್ನು ತಿಳಿಗೂಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಆರ್ ಕುಮಾರ್, ಹೆಚ್ ಪ್ರಭುಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ಡಿ. ನೀಲಿಸಿದ್ದಪ್ಪ, ನಿರ್ದೇಶಕರುಗಳಾದ ಎಸ್ ಮಣಿ, ಕುಮಾರಸ್ವಾಮಿ, ಆನಂದ್, ಕೆಂಚಪ್ಪ, ಆಶ್ವಥ್, ರಾಮಯ್ಯ, ಗುರುಮಲ್ಲಪ್ಪ, ಮಾಜಿ ನಿರ್ದೇಶಕರುಗಳಾದ ಎನ್.ಸಿದ್ದಪ್ಪ, ಮಾಜಿ ಅಧ್ಯಕ್ಷ ಹುಲಿರಾನಾಯಕ, ಮಾಜಿ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News