ಹೊನ್ನಾವರ: ಭೀಕರ ರಸ್ತೆ ಅಪಘಾತಕ್ಕೆ ತಾಯಿ-ಮಗಳು ಸೇರಿ ಐವರು ಬಲಿ

Update: 2018-09-15 15:04 GMT

ಹೊನ್ನಾವರ,ಸೆ.15: ಟೆಂಪೊ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಭವಿಸಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಅಪಘಾತದಲ್ಲಿ ಮೃತಟ್ಟವರನ್ನು ಕುಮಟಾ ತಾಲೂಕಿನ ಸುಮಂತಾ ಮಡಿವಾಳ(34), ಸಿಂಚನಾ ಮಡಿವಾಳ(6) ಬಗ್ಗೋಣದ ಕಮಲಾಕರ ಭಂಡಾರಿ(50), ಹೊನ್ನಾವರ ತಾಲೂಕಿನ ಕರ್ಕಿಯ ಮೋಹನ ಮೇಸ್ತಾ(50) ಹಾಗೂ ನಗರೆಯ ನಾಗರಾಜ್ ನಾಯ್ಕ(26) ಎಂದು ಗುರುತಿಸಲಾಗಿದೆ.

ಟೆಂಪೊ ಹೊನ್ನಾವರದಿಂದ ಕುಮಟಾ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ಟೆಂಪೊಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೆಂಪೊ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಏಳು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ತಾಯಿ-ಮಗಳು ಸೇರಿ ಮೂವರು ಪ್ರಯಾಣಿಕರು ಹಾಗೂ ಟೆಂಪೊ, ಲಾರಿಯ ಚಾಲಕರಿಬ್ಬರು ಮೃಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಹೊನ್ನಾವರದ ಸರಕಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಹೊನ್ನಾವರದ ಕರ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News