×
Ad

ಹನೂರು: ಕುಟುಂಬ ಕಲಹದಿಂದ ಬೇಸತ್ತು ಟವರ್ ಹತ್ತಿ ಕುಳಿತ ಮೂಕ ಯುವಕ

Update: 2018-09-15 22:55 IST

ಹನೂರು,ಸೆ.15: ಕುಟುಂಬ ಕಲಹದಿಂದ ಬೇಸತ್ತ ಮಾತುಬಾರದ ಯುವಕನೊರ್ವ ಮೊಬೈಲ್ ಟವರ್ ಹತ್ತಿ ಕುಳಿತ ಘಟನೆ ಎಲ್ಲೇಮಾಳ ಗ್ರಾಮದಲ್ಲಿ ನಡೆದಿದೆ.

ಹನೂರು ಸಮೀಪದ ಚಿಗತಾಪುರ ಗ್ರಾಮದ ಪರಶಿಮೂರ್ತಿ ಪುತ್ರ ಗುರುರಾಜ್ (25) ಟವರ್ ಏರಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ ಎಂದು ತಿಳಿದುಬಂದಿದೆ .

ಕುಟುಂಬ ಕಲಹದಿಂದ ಬೇಸತ್ತ ಯುವಕ ಎಲ್ಲೇಮಾಳ ಗ್ರಾಮದಲ್ಲಿರುವ ಏರ್‍ಟೆಲ್ ಟವರ್ ಏರಿದ್ದು, ತಕ್ಷಣ ಹನೂರು ಅಗ್ನಿಶಾಮಕ ದಳದ ಅಧಿಕಾರಿ ಶೇಷ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಬಂದು, ಯುವಕನನ್ನು ಸಮಾಧಾನಪಡಿಸಿ ಟವರ್ ನಿಂದ ಇಳಿಯುವಂತೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News