ಚಾಮರಾಜನಗರ: ಕಾಂಗ್ರೆಸ್-ಬಿಎಸ್‍ಪಿ ಕಾರ್ಯಕರ್ತರ ನಡುವೆ ಗಲಾಟೆ; ಎಂಟು ಮಂದಿಗೆ ಗಾಯ

Update: 2018-09-16 12:58 GMT

ಚಾಮರಾಜನಗರ,ಸೆ.16: ನಗರಸಭೆ ಚುನಾವಣಾ ಫಲಿತಾಂಶದಲ್ಲಿ ಉಂಟಾಗಿದ್ದ ವೈಮನಸ್ಸಿನ ಫಲವಾಗಿ ಇಂದು ಕಾಂಗ್ರೆಸ್ ಮತ್ತು ಬಿಎಸ್‍ಪಿ ಕಾರ್ಯಕರ್ತರ ನಡುವೆ ಮಾರಾಮರಿ ನಡೆದು ಎರಡು ಕಡೆಯ ಎಂಟು ಮಂದಿಗೆ ಗಾಯಗಳಾದ ಘಟನೆ ನಡೆದಿದೆ.

ಚಾಮರಾಜನಗರದ ರಾಮಸಮುದ್ರದಲ್ಲಿ ಪಕ್ಷದ ಬಾವುಟ ಕಟ್ಟುವ ವಿಚಾರವಾಗಿ ನಗರಸಭೆ ಚುನಾವಣೆಯ ಫಲಿತಾಂಶ ದಿನದಂದು ಘರ್ಷಣೆ ನಡೆದಿತ್ತು. ಅದರೆ ಅಂದು ಮದ್ಯಪ್ರವೇಶ ಮಾಡಿದ್ದ ಪೊಲೀಸರು ಗಲಾಟೆಯನ್ನು ತಣ್ಣಗೆ ಮಾಡಿ, ನಿಷೇದಾಜ್ಞೆ ಇದೆ ಎಂದು ಸಮದಾನ ಮಾಡಿ, ಸಮಸ್ಯೆಯ ಬಗ್ಗೆ ಬಡಾವಣೆಯಲ್ಲಿ ಮುಖ್ಯಸ್ಥರ ಮೂಲಕ ನ್ಯಾಯ ಪಂಚಾಯಿತಿ ಮೂಲಕ ಇತ್ಯಾರ್ಥ ಮಾಡಿಕೊಳ್ಳಿ ಎಂದು ತಿಳಿ ಹೇಳಿದ್ದರು ಎನ್ನಲಾಗಿದೆ.

ಆದರೆ ಆ ಘಟನೆಯ ಸಂಬಂಧ ಇಂದು ನ್ಯಾಯ ಪಂಚಾಯಿತಿಯಲ್ಲಿ ತೀರ್ಮಾನ ಮಾಡುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಎಸ್‍ಪಿ ಕಾರ್ಯಕರ್ತರ ನಡುವೆ ಮಾರಾಮರಿ ಹೊಡೆದಾಟ ನಡೆಯಿತು. ಎರಡೂ ಕಡೆಯ ಸುಮಾರು 8 ಮಂದಿಗೆ ತೀವ್ರ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News