ಮೈತ್ರಿ ಸರಕಾರ ಬಿದ್ದರೆ ಜಾರಕಿಹೊಳಿ ಸಹೋದರರು ಕಾರಣರಲ್ಲ: ಮಾಜಿ ಸಚಿವ ಸತೀಶ್ ಜಾರಕಿಹೊಳಿ

Update: 2018-09-16 14:53 GMT

ಬೆಳಗಾವಿ, ಸೆ. 16: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದರೆ ಅದಕ್ಕೆ ಜಾರಕಿಹೊಳಿ ಸಹೋದರರು ಕಾರಣವಲ್ಲ. ಆದರೆ, ಮೈತ್ರಿ ಸರಕಾರ ಸ್ಥಿರವಾಗಿದ್ದು, ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋದರೂ, ಹೋಗಬಹುದು. ಈ ಹಿಂದೆಯೂ ನಮ್ಮ ಪಕ್ಷದ ಕೆಲ ಶಾಸಕರು ಆಪರೇಷನ್ ಕಮಲಕ್ಕೆ ಬಳಿಯಾಗಿ ಬಿಜೆಪಿಗೆ ಹೋಗಿದ್ದರು ಎಂದು ಇದೇ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.

ಹಸ್ತಕ್ಷೇಪ ಸಲ್ಲ: ನಮ್ಮ ಬೇಡಿಕೆ ಬೆಳಗಾವಿ ಜಿಲ್ಲೆ ರಾಜಕಾರಣದಲ್ಲಿ ಬೇರೆ ನಾಯಕರು ಹಸ್ತಕ್ಷೇಪ ಮಾಡಬಾರದು ಎಂಬುದಾಗಿತ್ತು. ಆ ಬೇಡಿಕೆ ಈಡೇರಿದೆ. ಇದೀಗ ನಮ್ಮಲ್ಲಿ ಯಾವುದೇ ಒಡಕು ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಬಂದಿದ್ದಾರೆ. ಅವರನ್ನು ಭೇಟಿಯಾಗಲು ನಾಳೆ ನಾನೂ ಬೆಂಗಳೂರಿಗೆ ತೆರಳುವೆ. ಸಚಿವ ರಮೇಶ್ ಜಾರಕಿಹೊಳಿಯವರೂ ವೇಣುಗೋಪಾಲ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸ್ಪಷ್ಟಣೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಹೇಳಿಕ್ಕೊಳ್ಳಲಿಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವರನ್ನು ಭೇಟಿಯಾಗುವ ಅವಶ್ಯಕತೆಯೂ ನಮಗಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಚಿವ ರಮೇಶ ಜಾರಕಿಹೊಳಿ ಇಬ್ಬರು 20 ವರ್ಷದಿಂದ ಒಂದೇ ಗರಡಿ ಮನೆಯಲ್ಲಿ ಕುಸ್ತಿ ಆಡಿದವರು ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News