ಸಕಲೇಶಪುರ: ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ವ್ಯಕ್ತಿಗೆ ಹಲ್ಲೆಗೈದ ಪ್ರಕರಣ; 7 ಬಜರಂಗದಳ ಕಾರ್ಯಕರ್ತರ ಬಂಧನ

Update: 2018-09-16 16:26 GMT

ಸಕಲೇಶಪುರ,ಸೆ.16: ರಸ್ತೆ ಮದ್ಯೆ ಟೈರಿಗೆ ಬೆಂಕಿ ಹಚ್ಚಿ, ದನ ಸಾಗಾಟ ಮಾಡುತ್ತಿದ್ದ ವಾಹನ ತಡೆದು ವ್ಯಕ್ತಿಗೆ ಹಲ್ಲೆ ನಡೆಸಿದ್ದಲ್ಲದೇ, ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣದಲ್ಲಿ 7 ಮಂದಿ ಬಜರಂಗದಳದ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.

ರಘು, ಜಿಪ್ಪಿ ಶಿವು, ಜೀವನ್, ದೀಪು, ರನಿಕುಮಾರ್, ಸುರೇಶ್ ಮತ್ತು ಪವನ್ ಬಂಧಿತ ಆರೋಪಿಗಳು.

ಶುಕ್ರವಾರ ಮುಂಜಾನೆ 6 ಗಂಟೆಯ ಸಮಯದಲ್ಲಿ ತಾಲೂಕಿನ ದೋಣಿಗಾಲ್ ಗ್ರಾಮದಲ್ಲಿ ಲಾರಿಯೊಂದರಲ್ಲಿ ದಕ್ಷಿಣ ಕನ್ನಡಕ್ಕೆ ದನಗಳ ಸಾಗಿಸಲಾಗುತ್ತಿದೆ,  ದನ ಸಾಗಾಟಕ್ಕೆ ಪೊಲೀಸರು ಕುಮ್ಮಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಬಜರಂಗದಳದ ಕಾರ್ಯಕರ್ತರು ರಸ್ತೆತಡೆ ನಡೆಸಿದ್ದರು. ಅಲ್ಲದೇ, ಟೈರಿಗೆ ಬೆಂಕಿ ಹಚ್ಚಿ ವಾಹನಗಳನ್ನು ತಡೆದು ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ್ದರು. ಈ ಸಂದರ್ಭ ಪೋಲಿಸರೊಂದಿಗೆ ಮಾತಿನ ಚಕಮುಕಿ ನಡೆಸಿ ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ. 

ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸುತ್ತಿದ್ದ ಸಂದರ್ಭ ದನಗಳನ್ನು ಸಾಗಿಸುತ್ತಿದ್ದ ಸ್ಥಳೀಯ ವಾಹನವನ್ನು ಅಡ್ಡಗಟ್ಟಿದ್ದಲ್ಲದೇ, ವಾಹನ ಜಖಂಗೊಳಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. 

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News