ದಕ್ಷಿಣ ಚೀನಾಗೆ ಅಪ್ಪಳಿಸಿದ 'ಟೈಫೂನ್'

Update: 2018-09-16 17:59 GMT

ಹಾಂಕಾಂಗ್,ಸೆ.16 ಉತ್ತರಫಿಲಿಪ್ಪೀನ್ಸ್‌ನಲ್ಲಿ ಶನಿವಾರ ಭೀಕರ ಭೂಕುಸಿತಗಳು ಹಾಗೂ ಪ್ರವಾಹಗಳಿಂದಾಗಿ 28 ಮಂದಿಯನ್ನು ಬಲಿತೆಗೆದುಕೊಂಡಿದ್ದ ‘ಮಾಂಗ್ ಖುಟ್ ಟೈಫೂನ್ (ಚಂಡಮಾರುತ), ಇಂದು ಭಾರೀ ಜನಸಾಂದ್ರತೆಯ ಪ್ರದೇಶಗಳಾದ ಹಾಂಕಾಂಗ್ ಹಾಗೂ ದಕ್ಷಿಣ ಚೀನಾದ ಕರಾವಳಿಗಳ ಮೇಲೆ ಅಪ್ಪಳಿಸಿದ್ದು, ಭಾರೀ ನಾಶ,ನಷ್ಟವನ್ನುಂಟು ಮಾಡಿದೆ.

ಟೈಫೂನ್ ಭೀತಿಯ ಹಿನ್ನೆಲೆಯಲ್ಲಿ ದಕ್ಷಿಣ ಚೀನಾದ ಗುವಾಂಗ್‌ಡೊಂಗ್ ಪ್ರಾಂತದ ಏಳು ನಗರಗಳಿಂದ ಜನರನ್ನು ತೆರವುಗೊಳಿಸಲಾಗಿದೆ. ಹಾಂಕಾಂಗ್‌ನ ಚಂಡಮಾರುತ ವೀಕ್ಷಣಾಲಯವು, ನಗರದ ಪ್ರಸಿದ್ಧ ಪ್ರವಾಸಿ ಸ್ಥಳವಾದ ವಿಕ್ಟೋರಿಯಾ ಹಾರ್ಬರ್ ಪ್ರದೇಶದಿಂದ ದೂರವಿರುವಂತೆ ಜನತೆಗೆ ಎಚ್ಚರಿಕೆಯನ್ನು ನೀಡಿದೆ. ಮಾಂಗ್‌ಖುಟ್ ಚಂಡಮಾರುತ ಕರಾವಳಿ ತೀರವನ್ನು ಅಪ್ಪಳಿಸುವುದನ್ನು ತಡೆಯಲು ವಿಕ್ಟೋರಿಯಾ ಹಾರ್ಬರ್ ಪ್ರದೇಶದುದ್ದಕ್ಕೂ ಮರಳಿ ಚೀಲಗಳನ್ನು ಪೇರಿಸಿಡಲಾಗಿದೆ.

ಟೈಫೂನ್ ಭೀತಿಯ ಹಿನ್ನೆಲೆಯಲ್ಲಿ ಮಾಕಾವು ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಜೂಜುಗಾರಿಕೆಯ ಕ್ಯಾಸಿನೊಳನ್ನು ಮುಚ್ಚಲಾಗಿದೆಯೆಂದು ಮೂಲಗಳು ತಿಳಿಸಿವೆ.

    ರವಿವಾರ ಮುಂಜಾನೆ, ಮಾಂಗ್‌ಖುಟ್ ಟೈಫೂನ್‌ನೊಂದಿಗೆ,ತಾಸಿಗೆ 155 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿರುವುದಾಗಿ ಹಾಂಗ್‌ಕಾಂಗ್‌ನ ಚಂಡಮಾರುತ ವೀಕ್ಷಣಾಲಯದ ವರದಿ ತಿಳಿಸಿದೆ. ಟೈಫೂನ್ ಮಾಂಗ್‌ಖುಟ್ ತುಸು ದುರ್ಬಲಗೊಂಡಿದೆಯಾದರೂ, ಅದು ಭಾರೀ ಪ್ರಮಾಣದ ಮಳೆ ಸುರಿಯುವಂತೆ ಮಾಡಲಿದೆ ಹಾಗೂ ಭಾರೀ ಗಾತ್ರದ ಸಮುದ್ರದಲೆಗಳು ತೀರಕ್ಕೆ ಅಪ್ಪಳಿಸಲಿದೆಯೆಂದು ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News