ಹನೂರು: ಅಜ್ಜಿಪುರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

Update: 2018-09-17 17:18 GMT

ಹನೂರು.ಸೆ.17: ಅಜ್ಜಿಪುರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಸೋಮವಾರ ಬಸವರಾಜಮ್ಮರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಗೆ ಸೇರಿದ ಅಂಗಡಿ ಮಳಿಗೆಗಳಲ್ಲಿರುವ ಬಾಡಿಗೆದಾರರು ಸರಿಯಾಗಿ ಬಾಡಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಾಡಿಗೆದಾರರಿಗೆ ನೋಟಿಸ್ ನೀಡಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಗ್ರಾಮ ಪಂ.ಗೆ ಆದಾಯದ ಪ್ರಮಾಣ ಹೆಚ್ಚಿಸಲು ನಿವೇಶನ, ನೀರು, ಮತ್ತು ಮನೆಗಳ ತೆರಿಗೆ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಯಿತು.

ಗ್ರಾಮ ಪಂ. ಪಿ.ಡಿ.ಓ ನಂದೀಶ್ ಮಾತನಾಡಿ ಗ್ರಾಮ ಪಂ.ಗೆ ವಸತಿ ಯೋಜನೆಯಡಿ 25 ಹೊಸ ಮನೆಗಳ ಅನುಮೋದನೆ ದೊರೆತಿದ್ದು, ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಕುರಿತು ಮಾಹಿತಿ ನೀಡಿದರು. ಹಾಗೂ ಇನ್ನು ಮುಂದೆ ಆಧಾರ್ ಕಾರ್ಡ್ ಪರಿಷ್ಕರಣೆ, ಮತ್ತು ಹೊಸ ಕಾರ್ಡ್ ಮಾಡಲು ಸರ್ಕಾರಿ ಆದೇಶವಿದ್ದು, ಶೀಘ್ರದಲ್ಲಿಯೇ ಕಾರ್ಯ ಪ್ರವೃತ್ತರಾಗಬೇಕಾಗಿದೆ ಮತ್ತು ಗ್ರಾಮ ಪಂ.ಗೆ ಹೊಸ ಕಟ್ಟಡ ನಿರ್ಮಾಣ ಮಾಡಲು 15 ಲಕ್ಷ ರೂ ಮಂಜೂರಾಗಿದ್ದು, ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿದರು. 

ಈ ಸಂದರ್ಭ ಉಪಾಧ್ಯಕ್ಷ ರಾಜಮ್ಮಣಿ ಕಾರ್ಯದರ್ಶಿ ದಾಸ್ ಹಾಗು ಸದಸ್ಯರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News