×
Ad

ಹನೂರು: ಧಾರಕಾರ ಮಳೆಗೆ ಮನೆ ಗೋಡೆ ಕುಸಿತ

Update: 2018-09-17 22:52 IST

ಹನೂರು,ಸೆ.17: ಸೋಮವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಮನೆಯ ಗೋಡೆ ಸಂಪೂರ್ಣ ಕುಸಿದು ಪಿಠೋಪಕರಣಗಳು ನಾಶವಾಗಿರುವ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿ ಜಿಪಂ.ಗೆ ಸೇರಿದ ಗಂಡಿಮಾಳ ಗ್ರಾಮದಲ್ಲಿ ನಡೆದಿದೆ.

ರಾತ್ರಿ ಸುರಿದ ಮಳೆಗೆ ಇಲ್ಲಿನ ಶ್ರೀಕಂಠಚಾರ್ಯ ಎಂಬವರ ಮನೆ ಸಂಪೂರ್ಣ ಕುಸಿದಿದೆ. ಮನೆ ಕುಸಿಯುತ್ತಿದ್ದಂತೆ ಮನೆಯಲ್ಲಿದ್ದವರೆಲ್ಲಾ ಹೊರಗಡೆಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯ ಒಳಗಡೆ ಇದ್ದ ಸಾವಿರಾರು ರೂ. ಬೆಲೆ ಬಾಳುವ ಪಿಠೋಪಕರಣಗಳು  ಉಪಯೋಗಕ್ಕಾಗಿ ಬಾರದಂತಾಗಿದ್ದು, ಧವಸ ದ್ಯಾನಗಳು ಕೂಡ ಸಂಪೂರ್ಣ ಹಾನಿಯಾಗಿದೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News