ಹನೂರು: ತ್ರೋಬಾಲ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Update: 2018-09-18 17:03 GMT

ಹನೂರು,ಸೆ.18: ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಕೊಳ್ಳೇಗಾಲದಲ್ಲಿ ನಡೆದ 2018-19ನೇ ಸಾಲಿನ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಂಡಳ್ಳಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ತ್ರೋಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಅಲ್ಲದೇ, ಹರೀಶ್‍ ಕುಮಾರ್ 400 ಮೀ. ಓಟದಲ್ಲಿ ಪ್ರಥಮ ಹಾಗೂ 100 ಮೀ ಓಟದಲ್ಲಿ ದ್ವಿತೀಯ ಪಡೆದು ಜಿಲ್ಲಾ ಮಟ್ಟಕ್ಕೆ ಆಗಿದ್ದಾರೆ.

ಈ ವಿದ್ಯಾರ್ಥಿಗಳ  ಸಾಧನೆಗೆ ಬಂಡಳ್ಳಿ ತಾಪಂ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅದ್ಯಕ್ಷ, ಕಾಲೇಜ್ ಮೇಲುಸ್ತುವಾರಿ ಕಮಿಟಿಯ ಉಪಾದ್ಯಕ್ಷರೂ ಆದ ಜವಾದ್‍ ಅಹಮದ್, ಪ್ರಾಶುಂಪಾಲ ಮತ್ತುರಾಜ್, ಉಪನ್ಯಾಕರುಗಳಾದ ನಾಗಸುಂದರ್, ಬಸವರಾಜ್, ಶೀಲಾ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಜಿಲ್ಲಾ ಮಟ್ಟದಲ್ಲಿ ವಿಜೇತರಾಗಲೇಂದು ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News