ಹನೂರು: ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ

Update: 2018-09-18 17:17 GMT

ಹನೂರು,ಸೆ.18: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಯೋಜನೆಗಳಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ತಿಳಿಸಿದರು.

ತಾಲೂಕಿನ ಲೊಕ್ಕನಹಳ್ಳಿ ಜಿಪಂ ವ್ಯಾಪ್ತಿಗೆ ಸೇರಿದ ಪಿಜಿಪಾಳ್ಯ ಗ್ರಾಪಂ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಶಿಶು ಅಭಿವೃದ್ದಿ ಯೋಜನೆ ಕೊಳ್ಳೇಗಾಲ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಮಾಸಾಚರಣೆ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟುವ ಮಗುವು ಅಪೌಷ್ಟಿಕತೆಯಿಂದ ಬಳಲಿದಿರಲಿ ಎನ್ನುವ ದೃಷ್ಟಿಯಿಂದ ಸರ್ಕಾರವು ನೂತನವಾಗಿ ಮಾತೃಪೂರ್ಣ ಯೋಜನೆ ಜಾರಿಗೂಳಿಸಿದ್ದು, ಗರ್ಭಿಣಿಯರು ಅಂಗನವಾಡಿ ಕೇಂದ್ರಗಳ ಮುಖಾಂತರ ಇದರ ಸದುಪಯೋಗ ಪಡಿಸಿಕೊಳ್ಳಿ ಮತ್ತು ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪೋಷಾಕಾಂಶದ ಕೊರತೆ ಹೆಚ್ಚಿನ  ಪ್ರಮಾಣದಲ್ಲಿ ಕಾಣುತ್ತಿದ್ದು, ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು, ಶಾಲಾ ಮುಖ್ಯ ಶಿಕ್ಷಕರಾದ ಸ್ವಾಮಿ, ಪುಟ್ಟಲಿಂಗಮ್ಮ, ಪಿಎಮ್‍ಎಸ್‍ಆರ್ ಸಂಸ್ಥೆಯ ರಾಜಮ್ಮ ಸೇರಿದಂತೆ ಅಧಿಕಾರಿ ವೃಂದದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News