ಹುಬ್ಬಳ್ಳಿ: ಭಗವದ್ಗೀತೆ ಸುಟ್ಟ ಪ್ರಕರಣ; ಓರ್ವನ ಬಂಧನ

Update: 2018-09-19 12:04 GMT

ಹುಬ್ಬಳ್ಳಿ,ಸೆ.19: ಭಗವದ್ಗೀತೆ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಇನ್ನುಳಿದವರ ಬಂಧಿಸುವಂತೆ ಸೂಚನೆ ನೀಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ ಎನ್ ನಾಗರಾಜ್ ಹೇಳಿದರು.

ಮಾಧ್ಯಮ ‌ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ಮೇಲೆ ದೂರು ದಾಖಲು ಮಾಡಲಾಗಿದೆ. ಹುಬ್ಬಳ್ಳಿ ಮೂಲದ ಪಕ್ಕೀರಪ್ಪ ದೊಡ್ಡಮನಿ ಎಂಬಾತನನ್ನು ಬಂಧಿಸಲಾಗಿದೆ‌. ಉಳಿದವರ ಬಂಧನಕ್ಕೆ ಸೂಚನೆ ನೀಡಲಾಗಿದೆ ಎಂದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನ ಪ್ರತಿ ಸುಟ್ಟ ಪ್ರಕರಣಕ್ಕೆ ಪ್ರತಿಕಾರವಾಗಿ ಕಳೆದ ದಿನ ನಗರದ ಚೆನ್ನಮ್ಮ ವೃತ್ತದಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಮುಖಂಡರು ಸೇರಿ ನಡೆಸಿದ ಪ್ರತಿಭಟನೆ ವೇಳೆ ಭಗವದ್ಗೀತೆ ಜೊತೆ ಕೆಲ ಪುಸ್ತಕಗಳನ್ನು ಸುಟ್ಟು ಹಾಕಲಾಗಿತ್ತು.

ಪ್ರತಿಭಟನೆ ಬಳಿಕ ವೇದಿಕೆ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ. ಈ ಕುರಿತು ಅಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ ದಲಿತ ಸಂಘಟನೆಯ ಮುಖಂಡರು ಉಪ ನಗರ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರತಿಭಟನೆ ಮೆರವಣಿಗೆ ಬಳಿಕ ಕಾರ್ಯಕ್ರಮ ವೇದಿಕೆಯ ಮುಂಭಾಗದಲ್ಲಿ ಭಗವದ್ಗೀತೆ ಸುಟ್ಟು ಹಾಕಲಾಗಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News