ಅಸ್ಸಾಂ ಎನ್‌ಆರ್‌ಸಿ ಹಕ್ಕುಪ್ರತಿಪಾದನೆ, ಆಕ್ಷೇಪ ದಾಖಲಿಸಲು ಸುಪ್ರೀಂ ಆದೇಶ

Update: 2018-09-19 17:07 GMT

ಹೊಸದಿಲ್ಲಿ, ಸೆ. 19: ಅಸ್ಸಾಂನ ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಿ ಕರಡಿನಿಂದ ಹೊರಗುಳಿದ ಸುಮಾರು 40 ಲಕ್ಷ ಜನರು ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪ ಸಲ್ಲಿಸುವುದನ್ನು ಪುನಾರಂಭಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ.

ಅಸ್ಸಾಂ ರಾಷ್ಟ್ರೀಯ ನಾಗರಿಕ ರಿಜಿಸ್ಟರ್ ಕರಡಿನಿಂದ ಹೊರಗುಳಿದವರು ಹಕ್ಕು ಪ್ರತಿಪಾದನೆ ಹಾಗೂ ಆಕ್ಷೇಪಗಳ ಸಲ್ಲಿಕೆ ಪ್ರಕ್ರಿಯೆ ಸೆಪ್ಟಂಬರ್ 25ರಂದು ಆರಂಭವಾಗಲಿದೆ ಹಾಗೂ 60 ದಿನಗಳ ಕಾಲ ಇರಲಿದೆ ಎಂದು ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News