ದಸರಾ ಮಹೋತ್ಸವ ಹಿನ್ನಲೆ: ನಗರ ಪೊಲೀಸ್ ಆಯುಕ್ತರಿಂದ ಪಿರಂಗಿ ಗಾಡಿಗಳಿಗೆ ಪೂಜೆ

Update: 2018-09-19 17:27 GMT

ಮೈಸೂರು,ಸೆ.19: ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತರು ಸಾಂಪ್ರದಾಯಕವಾಗಿ ಕುಂಬಳಕಾಯಿ ಒಡೆಯುವ ಮೂಲಕ ಪೂಜೆ ಸಲ್ಲಿಸಿದರು.

ವಿಶ್ವವಿಖ್ಯಾತ ಮೈಸೂರು ದಸರಾ ವಿಜಯ ದಶಮಿಯ ದಿನದಂದು ಅರಮನೆಯಲ್ಲಿ ಮತ್ತು ಪಂಜಿನ ಕವಾಯತು ಮೈದಾನದಲ್ಲಿ 21 ಕುಶಲ ತೋಪುಗಳನ್ನ ಸಿಡಿಸುವ ಮೂಲಕ ಗೌರವ ಸಲ್ಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಂದು ಅರಮನೆಯಲ್ಲಿ 11 ಫಿರಂಗಿ ಗಾಡಿಗಳಿಗೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ ರಾವ್ ಕುಂಬಳಕಾಯಿ ಒಡೆದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ. ಸುಬ್ರಹ್ಮಣೇಶ್ವರ ರಾವ್, ದಸರಾ ವಿಜಯ ದಶಮಿಯಂದು ಸಿಡಿ ಮದ್ದಿನ ಪ್ರದರ್ಶನವಿರುತ್ತದೆ. ಫಿರಂಗಿಗಳ ಮೂಲಕ ಸಿಡಿಮದ್ದನ್ನು ಸಿಡಿಸಲಾಗುತ್ತದೆ. ಇದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ ಎಂದರು. 

ಇಂದು ಸಂಜೆ ಡ್ರೈ ಫಿರಂಗಿಗಳ ತಾಲೀಮು ನಡೆಯಲಿದೆ. ಕೆಲ ದಿನಗಳ ಬಳಿಕ ಆನೆಗಳು, ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ ತಾಲೀಮು ನೀಡಲಾಗುತ್ತದೆ. ಈ ಬಾರಿ 7 ಫಿರಂಗಿಗಳ ಮೂಲಕ ಸಿಡಿಮದ್ದು ಸಿಡಿಸಲಾಗುವುದು. 30 ಸಿಬ್ಬಂದಿ ಈ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯೂ ಸಹ ಅರಮನೆ ಆವರಣದಲ್ಲಿಯೇ ಸಿಡಿಮದ್ದಿನ ತಾಲೀಮು ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News