ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-20 15:55 GMT

ಹನೂರು,ಸೆ.20: ನಿಗದಿತ ಅವಧಿಯಲ್ಲಿ ಸಾಲಮರು ಪಾವತಿ ಮಾಡುವುದರ ಮೂಲಕ ಸಹಕಾರ ಸಂಘದ ಸವಲತ್ತುಗಳನ್ನು ಬಳಸಿಕೊಳ್ಳಿ ಎಂದು ಸೂಳೇರಿಪಾಳ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹದೇವಪ್ರಸಾದ್ ತಿಳಿಸಿದರು.

ಹನೂರು ತಾಲೂಕಿನ ಸೂಳೇರಿಪಾಳ್ಯ ( ಬಸಪ್ಪನದೊಡ್ಡಿ ) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸುಮಾರು 80 ಲಕ್ಷ ರೈತರ ಸಾಲ ಮನ್ನಾ ಮಾಡಲಾಯಿತು. ಈಗಿನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆಯಡಿ 1.40 ಕೋಟಿ ರೈತರ ಸಾಲಮನ್ನಾ ಮಾಡುತ್ತದೆ ಎಂದು ತಿಳಿಸಿದರು.

ಹಲವಾರು ವರ್ಷಗಳಿಂದ ನಮ್ಮ ಸಂಘದಲ್ಲಿ ಯಾವುದೇ ರೈತರು ಸುಸ್ಥಿದಾರರಿಲ್ಲದೆ ಸಾಲ ಮರು ಪಾವತಿ ಮಾಡುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು. ಸಂಘದಲ್ಲಿ ಹಾಲಿ 162 ರೈತರು ಸದಸ್ಯತ್ವವನ್ನು ಹೊಂದಿದ್ದು, ಹೊಸದಾಗಿ ಸೇರಲು ಇಚ್ಚಿಸುವವರು ಷೇರು ಕಟ್ಟಿ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಇದೇ ಸಂದರ್ಭ ತಿಳಿಸಿದರು.

ಈ ಸಂದರ್ಭ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಇರ್ಷಾದ್ ಅಹಮ್ಮದ್ ಷರೀಪ್, ನಿರ್ದೇಶಕರುಗಳಾದ ಗೌಸ್‍ಫೀರ್, ಕಲಂದರ್ ಪಾಷ, ಪಿ.ಕಾಳೇಗೌಡ, ಕೆಂಪನಂಜಮ್ಮಣಿ, ಓಬವ್ವ ಮತ್ತು ರೈತರು ಭಾಗವಹಿಸಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News