ಹನೂರು: 2017-18 ನೇ ಸಾಲಿನ ವಾರ್ಷಿಕ ಮಹಾಸಭೆ

Update: 2018-09-20 17:52 GMT

ಹನೂರು,ಸೆ.20: ರೈತರು ಪಶು ಸಂಗೋಪನೆಗೆ ವೈಜ್ಞಾನಿಕ ಪದ್ದತಿಯನ್ನು ಅನುಸರಿಸಿದರೆ ಮಾತ್ರ ಅಧಿಕ ಲಾಭಗಳಿಸಲು ಸಾಧ್ಯ ಎಂದು ಚಾಮುಲ್ ಪ್ರಭಾರ ವ್ಯವಸ್ಥಾಪಕ ಡಾ.ಎಂ.ಎನ್ ಆನಂದರಾಜು ತಿಳಿಸಿದರು.

ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ 2017-18 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹಾಲಿನ ಕೊಬ್ಬಿನ ಅಂಶ ಹೆಚ್ಚಾದಷ್ಟು ರೈತರು ಉತ್ತಮ ದರ ಪಡೆಯಬಹುದು. ಖನಿಜ ಮಿಶ್ರಣ, ಗೋಧಾರ ಶಕ್ತಿ ಪುಡಿ, ನೆಕ್ಕು ಬಿಲ್ಲೆ, ಜೋಳದ ನುಚ್ಚು, ಪಶು ಆಹಾರ, ಹಸಿರು ಮೇವಿನ ಜೊತೆ ಹೊಣ ಹುಲ್ಲು ಮುಂತಾದ ಸಮತೋಲನ ಆಹಾರ ನೀಡಿದ್ದಲ್ಲಿ ಹಾಲಿನ ಗುಣ ಮಟ್ಟ ಕಾಪಾಡ ಬಹುದು ಮತ್ತು ಗುಣ ಮಟ್ಟದ ಹಾಲು ಪೂರೈಕೆಯಿಂದ ಮಾತ್ರ ಡೇರಿ ಮತ್ತು ಲಾಭದಾಯಕವಾಗಿರಲು ಸಾದ್ಯ ಎಂದು ತಿಳಿಸಿದರು. ನಂತರ ಚಾಮುಲ್ ಉಪವ್ಯವಸ್ಥಾಪಕ ಹೆಚ್.ಸಿ ಶರತ್ ಕುಮಾರ್ ಮಾತನಾಡಿದರು. 

ಈ ಸಂದರ್ಭ ಅಧ್ಯಕ್ಷ ಲೂರ್ದುಸ್ವಾಮಿ, ಚಾಮುಲ್ ವಿಸ್ತರಣಾಧಿಕಾರಿ ಮಂಜುಳ, ಯೋಗೀಶ್, ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮದಲೈಮುತ್ತು, ಸಿಬ್ಬಂದಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ರೈತರುಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News