ಶೃಂಗೇರಿ: ವೈದ್ಯನಿಂದ ಬಾಲಕಿಯ ಅತ್ಯಾಚಾರ; ಆರೋಪ

Update: 2018-09-20 18:06 GMT

ಶೃಂಗೇರಿ, ಸೆ.20: ತಾಲೂಕಿನ ನೆಮ್ಮಾರ್ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯ ಬಾಲಕಿಯೋರ್ವಳನ್ನು ಅತ್ಯಾಚಾರಗೈದಿರುವ ಪ್ರಕರಣ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನೆಮ್ಮಾರು ಗ್ರಾಮದ ಹದಿಮೂರು ವರುಷದ ಪರಿಶಿಷ್ಟ ಜಾತಿಯ ಬಾಲಕಿ ಬುಧವಾರ ಸಂಜೆ ನೆಮ್ಮಾರ್ ಸರಕಾರಿ ಅಸ್ಪತ್ರೆಗೆ ಚಿಕಿತ್ಸೆ ಬಂದ ಸಂದರ್ಭದಲ್ಲಿ ವೈದ್ಯ ಡಾ.ಅನಿತ್‍ ಕುಮಾರ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ, ಆಕೆಯ ತಂದೆ ಗುರುವಾರ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರು ದಾಖಲಾಗುತ್ತಿದ್ದಂತೆ ಆರೋಪಿ ವೈದ್ಯ ನಾಪತ್ತೆಯಾಗಿದ್ದು, ಆರೋಪಿಯ ಬಂಧನಕ್ಕೆ ಪೋಲಿಸರು ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News