ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರ: ಮೃತಪಟ್ಟವರ ಸಂಖ್ಯೆ 84ಕ್ಕೆ ಏರಿಕೆ

Update: 2018-09-21 09:06 GMT

 ಬರೇಲಿ, ಸೆ.21: ಉತ್ತರ ಪ್ರದೇಶದಲ್ಲಿ ಕಳೆದ ಆರು ವಾರಗಳ ಅವಧಿಯಲ್ಲಿ ನಿಗೂಢ ಜ್ವರಕ್ಕೆ 84 ಮಂದಿ ಮಕ್ಕಳು  ಬಲಿಯಾಗಿದ್ದಾರೆ. ಉತ್ತರ ಪ್ರದೇಶದ 6 ಜಿಲ್ಲೆಗಳಲ್ಲಿ ನಿಗೂಢ ಜ್ವರ ಕಾಣಿಸಿಕೊಂಡಿದೆ.

ಬರೇಲಿ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, 24 ಮಂದಿ ಬರೇಲಿಯಲ್ಲಿ ಮೃತಪಟ್ಟಿದ್ದಾರೆ. ಬುಡೌನ್ ಜಿಲ್ಲೆಯಲ್ಲಿ  23ಮಕ್ಕಳು  ನಿಗೂಢ  ಕಾಯಿಲೆಗೆ ತುತ್ತಾಗಿದ್ದಾರೆ

 ನಿಗೂಢ ಜ್ವರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ  ಇನ್ನೊಂದು  ಸವಾಲು ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News