ಮಡಿವಾಳ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾಗಿ ವಿಜಯಲಕ್ಷ್ಮಿ ಆಯ್ಕೆ, ಸನ್ಮಾನ

Update: 2018-09-21 14:43 GMT

ಹಾಸನ,ಸೆ.21: ಬೆಂಗಳೂರು ಶೇಷಾದ್ರಿಪುರಂ, ಸಿರೂರು ಪಾರ್ಕ್ ಬಳಿ ಇರುವ ರಾಜ್ಯ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ರಾಜ್ಯಾಧ್ಯಕ್ಷೆಯಾಗಿ ಹಾಸನದ ವಿಜಯಲಕ್ಷ್ಮಿ ಅಂಜನಪ್ಪ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಮಾಚಿದೇವರ ಮಹಾಸಂಸ್ಥಾನ ಬಸವ ಮಾಚಿದೇವರ ಸ್ವಾಮೀಜಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪ, ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಕಾರ್ಯಾಧ್ಯಕ್ಷ ಸೊಗೂರಪ್ಪ ಮೂಲಿಮನಿ ಇತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News