ಧಾರವಾಡ ಕೃಷಿ ಮೇಳ ಸೆ.22ರಿಂದ ಪ್ರಾರಂಭ

Update: 2018-09-21 16:02 GMT

ಧಾರವಾಡ, ಸೆ.21: ಸಿರಿಧಾನ್ಯ ಬಳಸಿ-ಆರೋಗ್ಯ ಉಳಿಸಿ ಘೋಷವಾಕ್ಯಗೊಂದಿಗೆ ಧಾರವಾಡ ಕೃಷಿ ಮೇಳ ಸೆ.22ರಿಂದ 25ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಅವಧಿಯಲ್ಲಿ ಬರೋಬ್ಬರಿ 11-12 ಲಕ್ಷ ಜನರು ಮೇಳ ವೀಕ್ಷಣೆಗೆ ಬರುವುದಾಗಿ ಕೃಷಿ ವಿವಿ ಅಂದಾಜಿಸಿದೆ.

ಸಾವಯವ ಕೃಷಿ, ಸಮಗ್ರ ಕೃಷಿ ಪದ್ಧತಿ, ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ರೈತರ ಆದಾಯ ದ್ವಿಗುಣಗೊಳಿಸುವ ಸಮಾಲೋಚನೆ ಸೇರಿದಂತೆ ಕೃಷಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೃಷಿ ಮೇಳ ನಡೆಯಲಿದೆ. ಈ ವರ್ಷ ಒಟ್ಟು 697 ಮಳಿಗೆಗಳನ್ನು ತೆರೆಯಲಾಗುತ್ತಿದೆ. ರಾಜ್ಯ ಹಾಗೂ ಹೊರರಾಜ್ಯಗಳ ರೈತರು, ತಜ್ಞರು, ವಿಜ್ಞಾನಿಗಳು ಮೇಳದಲ್ಲಿ ಪಾಲ್ಗೊಳ್ಳುವರು ಎಂದು ಕೃಷಿ ವಿವಿ ನೂತನ ಕುಲಪತಿ ಎಂ.ಬಿ.ಚಟ್ಟಿ ವಿವರಿಸಿದ್ದಾರೆ.

ರೈತರಿಗೆ ಸಂವಾದ: ಮೇಳದ ನಿಮಿತ್ತ ಕೃಷಿ ವಸ್ತು ಪ್ರದರ್ಶನಕ್ಕೆ 205 ಹೈಟೆಕ್, 382 ಸಾಮಾನ್ಯ, 23 ಯಂತ್ರೋಪಕರಣ, 28 ಆಹಾರ ಮಳಿಗೆಗಳ ಜತೆಗೆ 40 ಮಳಿಗೆಗಳನ್ನು ಜಾನುವಾರು ಪ್ರದರ್ಶನಕ್ಕೆ ಮತ್ತು 19 ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ರೈತರಿಂದ ರೈತರಿಗಾಗಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News