×
Ad

ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಶರೀಫ್ ನೇಮಕ

Update: 2018-09-21 23:10 IST

ಮೈಸೂರು,ಸೆ.21: ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಪ್ರೊ.ಆಯಿಷಾ ಶರೀಫ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜೂಬಾಯಿ ರುಡಾಬಾಯಿ ವಾಲ ಆದೇಶ ಹೊರಡಿಸಿದ್ದಾರೆ.

ಹಂಗಾಮಿ ಕುಲಪತಿಯಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊ.ಕೆ.ಟಿ.ಉಮೇಶ್ ಅವರ ಅಧಿಕಾರವಧಿ ಕೊನೆಗೊಂಡ ಹಿನ್ನಲೆಯಲ್ಲಿ ನೂತನ ಕುಲಪತಿಗಳನ್ನು ನೇಮಕ ಮಾಡಲಾಗಿದೆ. ಪ್ರೊ.ಆಯಿಷ ಶರೀಫ್ ಅವರು ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಶನಿವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕಳೆದ 2017 ರ ಜನವರಿಯಿಂದ ಖಾಯಂ ಕುಲಪತಿ ನೇಮಕ ಮಾಡುವಲ್ಲಿ ಸರಕಾರ ವಿಫಲವಾಗಿದ್ದು, ಪ್ರೊ.ಆಯಿಷ ಶರೀಫ್ 6 ನೇ ಹಂಗಾಮಿ ಕಲಪತಿಗಳಾಗಿದ್ದಾರೆ.

ಮೈಸೂರು ವಿವಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರೊಬ್ಬರು ಕುಲಪತಿಗಳಾಗಿ ನೇಮಕಗೊಂಡಿರುವುದ ವಿಶೇಷ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News