ಹನೂರು: ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ

Update: 2018-09-22 17:26 GMT

ಹನೂರು,ಸೆ.22: ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ, ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದು ರಾಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಜೇಂದ್ರ ತಿಳಿಸಿದರು.

ರಾಮಾಪುರ ಕೃಷಿ ಪತ್ತಿನ ಸಹಕಾರ ಸಂಘದ 2017-18 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನ್ನಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ನಮ್ಮ ಸಂಘದ 52 ಜನ ರೈತರ 37.97 ಲಕ್ಷ ರೂ. ಸಾಲ ಮನ್ನಾ ಆಯಿತು. ಈಗಿನ ಸಮ್ಮಿಶ್ರ ಸರ್ಕಾರ ರೈತ ಸಾಲಮನ್ನಾ ಘೋಷಿಸಿದ್ದು, ಸಂಘದ 95 ಲಕ್ಷ ಸಾಲ ಮನ್ನಾ ಆಗಲಿದೆ ಎಂದು ತಿಳಿಸಿದರು.

ರಾಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಬಾಕರ್ ರವರು 2017-18 ನೇ ಸಾಲಿನ ಆದಾಯ ಮತ್ತು ಖರ್ಚಿನ ವಿವರ ನೀಡಿದರು. 

ಈ ಸಂದರ್ಭ ಉಪಾಧ್ಯಕ್ಷ ಮುತ್ತುರಾಮು, ಕೊಳ್ಳೇಗಾಲ ತಾಲೂಕು ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಹಾಗೂ ಇತರೆ ಸದಸ್ಯರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News