ಹನೂರು: ವಿವಿದೋದ್ಧೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-22 17:33 GMT

ಹನೂರು,ಸೆ.22: ಗಿರಿಜನರು ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಸಂಘಕ್ಕೆ ನೀಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮುಖ್ಯ ಕಾರ್ಯವಣಾಧಿಕಾರಿ ದೊಡ್ಡವೀರಶೆಟ್ಟಿ ತಿಳಿಸಿದರು. 

ಪಟ್ಟಣದ ಗಿರಿಜನರ ವಿವಿದೋದ್ಧೇಶ ಸಹಕಾರ ಸಂಘದ ವತಿಯಿಂದ ಶನಿವಾರ ಸಂಘದ ಆವರಣದಲ್ಲಿ ಆಯೋಜಿಸಿದ್ಧ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಹನೂರು ಭಾಗದ ಗಿರಿಜನರು ಅರಣ್ಯದಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಸಂಘಕ್ಕೆ ನೀಡುತ್ತಿದ್ದು, ಅದನ್ನು ಸಂಸ್ಕರಿಸಿ ಕಳೆದ 30 ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಸಂಘವು 5,95,866 ರೂ ಲಾಭ ಗಳಿಸಿದೆ ಎಂದು ತಿಳಿಸಿದರು.

ಈ ಹಿಂದೆ ಸರ್ಕಾರ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ ಇದೀಗ ಈ ಯೋಜನೆಯನ್ನು ಆರೋಗ್ಯ ರಕ್ಷಣಾ ವಿಮೆ ಎಂದು ಬದಲಾವಣೆ ಮಾಡಿದೆ. ಆದುದರಿಂದ ಸದಸ್ಯರು ಗ್ರಾಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪಡಿತರ ಚೀಟಿ, ಆಧಾರ್ ಕಾರ್ಡ್ ನೀಡಿ ಆರೋಗ್ಯ ಕಾರ್ಡ್ ಪಡೆದುಕೊಳ್ಳಬೇಕು ಎಂದರು. 

ಈ ಸಂದರ್ಭ ಸಂಘದ ಉಪಾಧ್ಯಕ್ಷ ಕರಿಯಪ್ಪ, ನಿರ್ದೇಶಕ ದೊಡ್ಡಯ್ಯ, ಚಂದ್ರಪ್ಪ, ಹುಚ್ಚಯ್ಯ, ರವೀಂದ್ರ, ನಾಗ, ಹುಚ್ಚಮ್ಮ, ತಿರುಮಮ್ಮ, ಸಂಘದ ನೌಕರರಾದ ಎಸ್.ಮಹದೇವಪ್ರಭು, ಬಸವರಾಜು, ಮುಖಂಡರಾದ ಮಾದಯ್ಯ, ರಂಗೇಗೌಡ, ಮುತ್ತಯ್ಯ ಹಾಗೂ ಇನ್ನಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News