ಹನೂರು: ಸಹಕಾರ ಸಂಘದ ವಾರ್ಷಿಕ ಮಹಾಸಭೆ

Update: 2018-09-23 13:20 GMT

ಹನೂರು,ಸೆ.23: ಉದ್ದನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು.

ಸಹಕಾರ ಸಂಘದ ಅಧ್ಯಕ್ಷ ಎಸ್.ಮಹದೇವಸ್ವಾಮಿ ಸಭೆಯನ್ನು ಉದ್ಘಾಟಿಸಿದರು. ನಂತರ ಕಾರ್ಯದರ್ಶಿ ಶಾಂತಮೂರ್ತಿ ಈ ವರ್ಷದ ಲೆಕ್ಕ ಪತ್ರ ಹಾಗೂ ಮುಂದಿನ ಬಜೆಟನ್ನು ಮಂಡಿಸಿದರು. ನಂತರ ಸಂಘದ ಅಧ್ಯಕ್ಷ ಎಸ್.ಮಹದೇವಸ್ವಾಮಿ ಮಾತನಾಡಿದರು.

ಈ ಸಂದರ್ಭ ಸಂಘದ ರುದ್ರಪ್ಪ, ದುಂಡಪ್ಪ, ನಂಜನಾಯಕ, ಸುಬ್ಬೆಗೌಡ, ಎಂ.ಕೆಂಪದೇವರು, ನಂಜನಾಯಕ ರಾಚೇಗೌಡ, ಹೊನ್ನಯ್ಯ, ಚಲುವಾಂಬ ಮಹದೇವಮ್ಮ, ಕಾರ್ಯದರ್ಶಿ ಶಾಂತಮೂರ್ತಿ ಮತ್ತು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News