ಪೌರ ಕಾರ್ಮಿಕರ ಸೇವೆ ಸಮಾಜಕ್ಕೆ ಮಾದರಿ: ಶಾಸಕ ಸಿ.ಟಿ.ರವಿ

Update: 2018-09-23 13:36 GMT

ಚಿಕ್ಕಮಗಳೂರು, ಸೆ.23: ಪೌರ ಕಾರ್ಮಿಕರು ಸಮಾಜ ನಿರ್ಮಾಣಕ್ಕೆ ಶ್ರಮಿಸುವ ತ್ಯಾಗ ಜೀವಿಗಳು. ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ರಾಮನಹಳ್ಳಿಯ ಡಯೆಟ್ ಕಾಲೇಜಿನ ಮೈದಾನದಲ್ಲಿ ಪೌರ ಕಾರ್ಮಿಕರ ದಿನಾಚಾರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಪೌರ ಕಾರ್ಮಿಕರು ನಗರದ ನೈರ್ಮಲ್ಯ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಶ್ರಮ ಜೀವಿಗಳು ಎಂದರು. ವೈಯಕ್ತಿಕ ಆರೋಗ್ಯದ ಬಗ್ಗೆಯು ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಣಾ ವೇಳೆಯಲ್ಲಿ ಆರೋಗ್ಯದ ದೃಷ್ಠಿಯಿಂದ ತಮಗೆ ನೀಡಿರುವ ಸಾಧನ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಮಾತನಾಡಿ, ದೇಶದ ರಕ್ಷಣೆಗೆ ಸೈನಿಕರು ಎಷ್ಟು ಮುಖ್ಯವೊ ನಮ್ಮ ಸುತ್ತಮುತ್ತಲಿನ ಸ್ವಚ್ಚತೆ ಕಾಪಾಡಲು ಪೌರ ಕಾರ್ಮಿಕರು ಅಷ್ಟೇ ಮುಖ್ಯ. ನಿಮ್ಮ ಆರೋಗ್ಯ ಕಾಪಾಡಲು ನಗರಸಭೆ ಸದಾ ಸಿದ್ಧ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಸುಧೀರ್, ಮಾಜಿ ಅಧ್ಯಕ್ಷ ಪುಷ್ವರಾಜ್, ಮುತ್ತಯ್ಯ, ಸದಸ್ಯರಾದ ರಾಜಶೇಖರ್, ನರಸಿಂಹ, ವನಿತಾ, ಆಯುಕ್ತರಾದ ತುಷಾರಮಣಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಯ್ಯ, ಪೌರಸೇವಾ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News