ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

Update: 2018-09-23 13:47 GMT

ಹನೂರು,ಸೆ.23: ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮಸ್ಥರು ಇದರ ಲಾಭವನ್ನು ಪಡೆಯಬೇಕು ಎಂದು ಪಿಡಿಒ ರಾಜೇಶ್ ತಿಳಿಸಿದರು.

ಹನೂರು ತಾಲೂಕಿನ ಗಡಿಹಂಚಿನ ಗ್ರಾಮವಾದ ಗೋಪಿನಾಥಂ ಗ್ರಾಮ ಪಂಚಾಯತ್ ವ್ಯಾಪ್ತಿಯಲಿ ಆಯೋಜಿಸಿದ್ಧ 2018-19ನೇ ಸಾಲಿನ ನರೇಗಾ ಯೋಜನೆಯಡಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಉದ್ಯೋಗ ಪಡೆಯ ಬಯಸುವವರು ಗ್ರಾಪಂಗೆ ನಿಗದಿತ ನಮೂನೆಯ 6ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆದುದರಿಂದ ಗ್ರಾಪಂ ವ್ಯಾಪ್ತಿಯ ಪ್ರತಿ ಕುಟುಂಬವು ಈ ಯೋಜನೆ ಪ್ರಯೋಜನ ಪಡೆದುಕೊಳ್ಳವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭ ಗ್ರಾಪಂ ಅಧ್ಯಕ್ಷ ಮುರುಗೇಶನ್, ತಾಪಂ ಸದಸ್ಯ ಶಕುಂತಲಾಜು, ನೋಡಲ್ ಅಧಿಕಾರಿ ಕಂದಸ್ವಾಮಿ, ಸದಸ್ಯರಾದ ಗೋವಿಂದರಾಜು, ಕೃಷ್ಣ ದುರ್ಗಾ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News