ಮಂಡ್ಯ: ನಂದೀಶ್ ಕುಟುಂಬಕ್ಕೆ ಬಿಜೆಪಿ ಮುಖಂಡರಿಂದ ಸಾಂತ್ವನ

Update: 2018-09-23 14:39 GMT

ಮಂಡ್ಯ, ಸೆ.23: ತಾಲೂಕಿ ಸುಂಕಾತೊಣ್ಣೂರಿನಲ್ಲಿ ಸಾಲಬಾಧೆಯಿಂದ ನಾಲ್ವರು ಆತ್ಮಹತ್ಯೆಗೆ ಶರಣಾದ ಕುಟುಂಬದ ಮನೆಗೆ ಬಿಜೆಪಿ ಮುಖಂಡರು ಭೇಟಿಕೊಟ್ಟು ಸಾಂತ್ವಾನ ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟೆಶ್ರೀನಿವಾಸಪೂಜಾರಿ ಸೇರಿದಂತೆ ಇನ್ನಿತರ ನಾಯಕರು ಪಕ್ಷದಿಂದ 2 ಲಕ್ಷ ಪರಿಹಾರ ನೀಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ರಾಜ್ಯ ಸರಕಾರ ನಾವು ರಾಜ್ಯದ ರೈತರ 48 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೂ ಸಹ ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ನಿಲ್ಲುತ್ತಿಲ್ಲ. ರೈತರ ಸಾಲಮನ್ನಾ ಕೇವಲ ಪುಸ್ತಕದಲ್ಲಿ ಇದೆಯೇ ಹೊರತು ಸಾಲಮನ್ನಾದ ಹಣ ರೈತರ ಕೈಸೇರದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಸಾಲಮನ್ನದ ಹಣವನ್ನು ರೈತರಿಗೆ ತಲುಪಿಸಲು ರಾಜ್ಯಸರಕಾರ ಎಡವಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮಿಶ್ರ ಸರಕಾರ ಉಳಿಯೋದಿಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಾವೇನು ಸರಕಾರ ಬೀಳಿಸೋ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರಿಂದಲೇ ಸರಕಾರ ಬೀಳುತ್ತಿದೆ. ಸರಕಾರದ ಅಸ್ಥಿರತೆಯಿಂದ ಅಭಿವೃದ್ದಿ ಕುಂಟಿತವಾಗುತ್ತಿದೆ ಎಂದು ಟೀಕಿಸಿದರು.

ಸುಂಕಾತೊಣ್ಣೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಇದುವರೆಗೂ ಮುಖ್ಯಮಂತ್ರಿಗಳಾಗಲಿ, ಜಿಲ್ಲಾಡಳಿತವಾಗಲಿ ಭೇಟಿಕೊಟ್ಟು ಸಾಂತ್ವಾನ ಹೇಳಿಲ್ಲ. ರಾಜ್ಯದ ತೋಟಗಾರಿಕೆ ಸಚಿವರು ರೈತರ ಆತ್ಮಹತ್ಯೆಗೆಯ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ ಎಂದು ದೂರಿದರು.

ಶಾಸಕರಾದ ಕೃಷ್ಣಪ್ಪ, ನಾಗೇಂದ್ರ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್‍ನಾರಾಯಣಗೌಡ, ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಎಚ್.ಎನ್.ಮಂಜುನಾಥ್, ಎಚ್.ಮಂಜುನಾಥ್, ಜೆ.ಶಿವಲಿಂಗೇಗೌಡ, ಶ್ರೀಧರ್, ಆನಂದ್, ರೈಸ್‍ಮಿಲ್‍ತಮ್ಮಣ್ಣ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News