×
Ad

ಶತಾಯುಷಿಗೆ ಪದಕಗಳ ಕನಸು...

Update: 2018-09-23 23:57 IST

ಹಿರಿಯ ಅಥ್ಲೀಟ್ ಮಾನ್ ಕೌರ್‌ಗೆ 102ಹರೆಯ. ಆದರೆ ಪದಕಗಳನ್ನು ಗೆಲ್ಲುವ ಹಸಿವು ನಿಂತಿಲ್ಲ. ಸ್ಪೇನ್‌ನಲ್ಲಿ ಇತ್ತೀಚೆಗೆ ನಡೆದ ವರ್ಲ್ಡ್‌ಮಾಸ್ಟರ್ಸ್‌ ಟ್ರಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯಲ್ಲಿ ಅವರು ಚಿನ್ನ ಜಯಿಸಿದ್ದಾರೆ. ಶತಾಯುಷಿ ಕೌರ್ ಅವರು ಇದೀಗ ಮುಂದಿನ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ. ಪೋಲೆಂಡ್‌ನಲ್ಲಿ ಮಾರ್ಚ್ 2019ರಲ್ಲಿ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಇಂಡೋರ್ ಚಾಂಪಿಯನ್‌ಶಿಪ್‌ನಲ್ಲಿ ಕೌರ್ 60 ಮತ್ತು 200 ಮೀಟರ್ ಓಟದಲ್ಲಿ ಸ್ಪರ್ಧಿಸುವ ಯೋಚನೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor