ಪಶ್ಚಿಮ ಬಂಗಾಳದಲ್ಲಿ ಕುಸಿದುಬಿದ್ದ ಸೇತುವೆ

Update: 2018-09-24 08:44 GMT

ಹೊಸದಿಲ್ಲಿ, ಸೆ.24: ಪಶ್ಚಿಮ ಬಂಗಾಳದ ಕಕ್ದಿಪ್ ಎಂಬಲ್ಲಿರುವ ಸೇತುವೆಯೊಂದು ಸೋಮವಾರ ಕುಸಿದು ಬಿದ್ದಿದ್ದು, ರಾಜ್ಯದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೆ ಘಟನೆ ಇದಾಗಿದೆ.

“ಸೇತುವೆ ಇಂದು ಕುಸಿದು ಬಿದ್ದಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲ. ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 4ರಂದು ಕೊಲ್ಕತ್ತಾದ ಮಜೇರ್ ಹಾಟ್ ನಲ್ಲಿ ಸೇತುವೆ ಕುಸಿದು ಬಿದ್ದು 24 ಮಂದಿ ಗಾಯಗೊಂಡು ಮೂವರು ಮೃತಪಟ್ಟಿದ್ದರು. ಸೆಪ್ಟಂಬರ್ 7ರಂದು ಸಿಲಿಗುರಿಯಲ್ಲಿ ಸೇತುವೆಯೊಂದು ಕುಸಿದುಬಿದ್ದಿತ್ತು. ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News