ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕ್ರೀಡಾಕೂಟ: ಸೈಂಟ್ ಮೇರಿಸ್ ಕಾಲೇಜು ತಂಡ ರಾಜ್ಯಮಟ್ಟಕ್ಕೆ ಆಯ್ಕೆ

Update: 2018-09-24 12:35 GMT

ಚಿಕ್ಕಮಗಳೂರು, ಸೆ.24: ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ಹ್ಯಾಂಡ್‍ಬಾಲ್ - ಬಾಲಕರು, ನೆಟ್‍ಬಾಲ್ - ಬಾಲಕ, ಬಾಲಕಿಯರು, ಬ್ಯಾಸ್ಕೆಟ್‍ಬಾಲ್ - ಬಾಲಕಿಯರು, ಟೆನ್ನಿಸ್ ವಾಲಿಬಾಲ್ - ಬಾಲಕ, ಬಾಲಕಿಯರು, ಕುಸ್ತಿ, ಕರಾಟೆ, ಈಜು ಹಾಗೂ ಅಥ್ಲೆಟಿಕ್ಸ್ ಈ ಎಲ್ಲಾ ಆಟಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು, ರಾಜ್ಯ ಮಟ್ಟಕ್ಕೆ 42 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅನೀಶ್ ಥಾಮಸ್ ತಿಳಿಸಿದ್ದಾರೆ.  

ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ.ಗ್ರೆಗರಿ ಲೋಬೋ ಶುಭಕೋರಿ, ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿ ಹಾಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News