ಹನೂರು: ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಶಿಲಾನ್ಯಾಸ

Update: 2018-09-24 16:59 GMT

ಹನೂರು,ಸೆ.24: ಹನೂರು ಪಟ್ಟಣದ 1 ಮತ್ತು 2ನೇ ವಾರ್ಡ್ ನ ಆದಿಜಾಂಬವರ ಬಡಾವಣೆಯಲ್ಲಿ ಸುಮಾರು 1ಕೋಟಿ ಅಂದಾಜು ವೆಚ್ಚದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ದಿ ಮಂಡಳಿ ವತಿಯಿಂದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸಲು ಶಾಸಕ ಆರ್.ನರೇಂದ್ರರಾಜುಗೌಡ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಕರ್ನಾಟಕ ಕೊಳಚೆ ಪ್ರದೇಶ ( ಅಭಿವೃದ್ದಿ ಮತ್ತು ನಿರ್ಮೂಲನೆ ಖಾಯಿದೆ) ಇದರ ಅನ್ವಯ ರಾಜ್ಯದ ಬಡ ಜನರು ವಾಸಿಸುವ ಕೊಳಚೆ ಪ್ರದೇಶಗಳು ಮೂಲಭೂತಸೌಲಭ್ಯಗಳಿಂದ ವಂಚಿತರಾಗಿದ್ದು, ಜೀವಿಸಲು ಯೋಗ್ಯವಲ್ಲದ ವಾತವಾರಣವಿದೆ. ಅವರ ಜೀವನ ಮಟ್ಟವನ್ನು ಸುಧಾರಿಸುವ ದಿಸೆಯಲ್ಲಿ ಸರ್ಕಾರವು ಕೊಳಚೆ ನಿವಾಸಿಗಳ ಅಭಿವೃದ್ದಿಗಾಗಿ ಕರ್ನಾಟಕ ಅಭಿವೃದ್ದಿ ಮಂಡಳಿಯನ್ನು ಸ್ಥಾಪಿಸಿದ್ದು, ಈ ಯೋಜನೆ ಮೂಲಕ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಮಾಡಬಹುದಾಗಿದೆ ಎಂದರು.

ಈ ಸಂದರ್ಭ ಪಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ರಾಜುಗೌಡ , ಸದಸ್ಯ ರಮೇಶನಾಯ್ಡು ಸದಸ್ಯೆ ಮಹದೇವಮ್ಮ , ರೋಟರಿ ಅದ್ಯಕ್ಷ ಗಿರೀಶ್, ಕಾರ್ಯಪಾಲಕ ಅಭಿಯಂತರ ಜವಾಹಾರ್, ಗುತ್ತಿಗೆದಾರ ನಾಗರಾಜು, ಮುಖಂಡರಾದ ಚಿಕ್ಕತಮ್ಮಯ್ಯಗೌಡ, ವೆಂಕಟರಮಣನಾಯ್ಡು, ಮಹೇಶ್, ರಾಜು, ನಟರಾಜು ರಾಜೇಶ್, ಸುದೇಶ್, ತಿಪ್ಪುರಾಯ, ರಾಜಣ್ಣ ರಂಗಸ್ವಾಮಿ, ಗುರಸ್ವಾಮಿ ,ಮಹೇಶ್ ,ಮಂಠ್ಯ ಇನ್ನಿತರರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News