ನಾಗಮಂಗಲ: ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ

Update: 2018-09-24 18:29 GMT

ನಾಗಮಂಗಲ, ಸೆ.24: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಜಾನಪದ ಕಲಾಮೇಳದ ಎರಡನೇ ದಿನವಾದ ಸೋಮವಾರ ಐದು ಮಂದಿ ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು.

ಡಾ.ಎಚ್.ಡಿ.ಚೌಡಯ್ಯ (ಶಿಕ್ಷಣ), ಆರ್.ಕೆ.ಪದ್ಮನಾಭ (ಸಂಗೀತ), ಸಿ.ಚಿಕ್ಕಣ್ಣ(ಆಡಳಿತ), ಬಿ.ಸಿ.ರಮೇಶ್(ಕ್ರೀಡೆ) ಹಾಗೂ ಡಾ.ಎ.ಸಿ.ಚನ್ನೇಗೌಡ( ವೈದ್ಯಕೀಯ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಜಾನಪದ, ಶಿಕ್ಷಣ ಮತ್ತು ಆರೋಗ್ಯಕ್ಷೇತ್ರದಲ್ಲಿ ಆದಿಚುಂಚನಗಿರಿ ಕ್ಷೇತ್ರ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

ಪ್ರತಿವರ್ಷ ಜಾನಪದ ಕಲಾಮೇಳ ನಡೆಸುವ ಮೂಲಕ ಜಾನಪದ ಕಲೆ ಉಳಿವಿಗೆ ಶ್ರೀಮಠ ಶ್ರಮಿಸುತ್ತಿದೆ. ಮನುಷ್ಯನ ದಿನನಿತ್ಯದ ಬದುಕಿನ ಜೀವನ ಕ್ರಮ ಜಾನಪದ ಕಲೆಯಲ್ಲಿ ಅಡಗಿದೆ. ಜಾನಪದವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿದರು. ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಆಶೀರ್ವಚನ ನೀಡಿದರು. ಪುರುಷೋತ್ತಮನಂದನಾಥಸ್ವಾಮೀಜಿ, ಪ್ರಸನ್ನನಾಥಸ್ವಾಮೀಜಿ, ಸೋಮನಾಥ ಸ್ವಾಮೀಜಿ, ಶುಂಭುನಾಥಸ್ವಾಮೀಜಿ, ಶೃಂಗೇರಿಗುಣನಂದನಾಥ ಮಹಸ್ವಾಮೀಜಿ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News