ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಾಗವಹಿಸಿದ್ದ ಯೋಧ ಸಂದೀಪ್ ಸಿಂಗ್ ಹುತಾತ್ಮ

Update: 2018-09-25 09:07 GMT

ಹೊಸದಿಲ್ಲಿ, ಸೆ.25: 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಯೋಧ ಲ್ಯಾನ್ಸ್ ನಾಯ್ಕ್ ಸಂದೀಪ್ ಸಿಂಗ್ ನಿನ್ನೆ ನಡೆದ ಕಾರ್ಯಾಚರಣೆಯೊಂದರಲ್ಲಿ ಹುತಾತ್ಮರಾಗಿದ್ದಾರೆ.

ಜಮ್ಮು ಕಾಶ್ಮೀರದ ತಂಗ್ಧಾರ್ ನಲ್ಲಿ ಇಬ್ಬರು ನುಸುಳುಕೋರರನ್ನು ಹೊಡೆದುರುಳಿಸಿದ ಸಂದೀಪ್ ಸಿಂಗ್ ಹುತಾತ್ಮರಾಗಿದ್ದಾರೆ. ಪಂಜಾಬ್ ನ ಗುರ್ ದಾಸ್ ಪುರದವರಾದ ಸಂದೀಪ್ ಸಿಂಗ್ 2007ರಲ್ಲಿ ಸೇನೆಯನ್ನು ಸೇರಿದ್ದರು. 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಅವರು ಪಾಲ್ಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News