ಹನೂರು: ವಿದ್ಯತ್ ಸರಬರಾಜು ಇಲಾಖೆ ವತಿಯಿಂದ ಜನಸಂಪರ್ಕ ಸಭೆ

Update: 2018-09-25 16:25 GMT

ಹನೂರು,ಸೆ.25: ಜನವಿರೋಧಿ ರೈತವಿರೋಧಿ ಜನಸಂಪರ್ಕ ಸಭೆಯನ್ನು ಅಧಿಕಾರಿಗಳು ಕಾಟಚಾರಕ್ಕೆ ನಡೆಸುತ್ತಾರೆ. ಪದೇ ಪದೇ ಹಳೇ ಪ್ರಕರಣಗಳೇ ಹೆಚ್ಚಾಗಿ ದೂರು ಕೇಳಿ ಬರುತ್ತಿವೆ. ಬಗೆಹರಿಸುವಲ್ಲಿ ಚೆಸ್ಕಾಂ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್ ಮತ್ತು ರೈತ ಮುಖಂಡರು ಆರೋಪಿಸಿದರು.

ಹನೂರು ಪಟ್ಟಣದ ಚಾಮುಂಡೇಶ್ವರಿ ವಿದ್ಯತ್ ಸರಬರಾಜು ಇಲಾಖೆ ವತಿಯಿಂದ ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ರಸ್ತೆಯ ವಿದ್ಯುತ್ ಕಂಬಗಳಲ್ಲಿ ಬಳ್ಳಿಗಳು ಹಬ್ಬಿ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿಲ್ಲ ಹಾಗೂ ಚೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಳೆದ ತಿಂಗಳು 16 ಕಂಬಗಳನ್ನು ಬದಲಾವಣೆ ಮಾಡಿದ್ದಾರೆ. ಅದರಲ್ಲಿ ಕಬ್ಬಿಣದ 4 ಕಂಬಗಳು ಇಲಾಕೆಗೆ ಬಂದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುಜರಿ ಪಾಲಾಗಿದೆ ಎಂದು ಆರೋಪಿಸಿದರು.

ಹನೂರು ಘಟಕದ ರೈತ ಸಂಘದ ಅಧ್ಯಕ್ಷ ಕರಿಯಪ್ಪ ಮಾತನಾಡಿ, ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಇಲಾಖೆಯಲ್ಲಿ ರೈತರಿಗೆ ಕರ್ತವ್ಯ ನಿರ್ವಹಿಸದೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸುಲಿಗೆಕೋರರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೂಪರಿಡಿಯಂಟ್ ಪ್ರದೀಪ್ ಮಾತನಾಡಿ ಕಳೆದ ಜನಸಂಪರ್ಕ ಸಭೆಗಳಲ್ಲಿ ಸ್ವೀಕರಿಸಿದ್ದ ದೂರುಗಳಲ್ಲಿನ ಬಹುತೇಕ ಸಮಸ್ಯೆಗಳನ್ನು ಈಗಾಗಲೇ ಪರಿಹರಿಸಲಾಗಿದೆ. ಇಲ್ಲಿನ ಸಿಬ್ಬಂದಿಗಳು ಈ ಜನಸಂಪರ್ಕ ಸಭೆಯಲ್ಲಿ ರೈತರು ಸಲ್ಲಿಸುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಜನಸಂಪರ್ಕ ಸಭೆಯೊಳಗೆ ಅವುಗಳನ್ನು ಬಗೆಹರಿಸಬೇಕು ಎಂದು ತಾಕೀರು ಮಾಡಿದರು. 

ಮಾತಿನ ಚಕಮಕಿ: ಈ ಸಂದರ್ಭದಲ್ಲಿ ಅಧೀಕ್ಷಕ ಇಂಜಿನಿಯರ್ ಪ್ರತಾಪ್ ಮಾತನಾಡಿ, ಈ ಹಿಂದಿನ ಸಭೆಯಲ್ಲಿ ಪಡೆದಿರುವ ದೂರುಗಳಲ್ಲಿ ಈಗಾಗಲೇ ಬಹುತೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಅದನ್ನು ತಿಳಿಸಲು ಹಾಗೂ ಸಭೆಯಲ್ಲಿ ನಾವು ಮಾತನಾಡಲು ಅವಕಾಶ ಕೊಡಿ. ಒಬ್ಬರೇ ಮಾತನಾಡುವುದು ಸರಿಯಲ್ಲ. ಇದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಮನವಿ ಮಾಡಿದರು. ನೀವು ಸಮಸ್ಯೆಗಳನ್ನು ಸಮರ್ಪಕವಾಗಿ ಪರಿಹರಿಸಿಲ್ಲ ಎಂದು ಕರವೇ ಅಧ್ಯಕ್ಷ ವಿನೋದ್‍ಕುಮಾರ್ ಹಾಗೂ ಮತ್ತಿತರರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಅಧಿಕಾರಿಗಳು, ನೌಕರರು ಹಾಗೂ ವಿನೋದ್‍ಕುಮಾರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗೊಂದಲದ ವಾತವರಣ ಸೃಷ್ಠಿಯಾಯಿತು. ಬಳಿಕ ಶಾಂತವಾಯಿತು.

ಈ ಸಂದರ್ಭ ಎ.ಇ. ತಾರ. ಎಇಇಗಳಾದ ನಿಂಗರಾಜು, ಪ್ರತಾಪ್  ಜೆ.ಇ ರಂಗಸ್ವಾಮಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News