ಹನೂರು: ಅಸಮರ್ಪಕ ಕಸ ವಿಲೇವಾರಿ; ಅಗತ್ಯ ಕ್ರಮ ವಹಿಸಲು ಮನವಿ

Update: 2018-09-25 17:52 GMT

ಹನೂರು,ಸೆ.25: ಗ್ರಾಮದ ವಿವಿದೆಡೆ ಸಮರ್ಪಕವಾಗಿ ಕಸ ವಿಲೇವಾರಿಯಾಗಿಲ್ಲ ಮತ್ತು ಕೆಲವು ಬಡಾವಣೆಗಳಲ್ಲಿ ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು, ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಕ್ರಮವಹಿಸುವಂತೆ ಕೌದಳ್ಳಿ ಪಿಡಿಒಗೆ ಹನೂರು ಘಟಕದ ಸೋಶಿಯಲ್ ಡೆಮಾಟ್ರಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.

ನಂತರ ಮಾದ್ಯಮದ ಬಳಿ ಎಸ್‍ಡಿಪಿಐ ಅಧ್ಯಕ್ಷ ನೂರುಲ್ಲಾ, ಕೌದಳ್ಳಿ ಗ್ರಾಮ ಪಂ. ವ್ಯಾಪ್ತಿಯ ವಿವಿಧ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ರಾಶಿ ರಾಶಿ ಕಸದ ರಾಶಿಗಳು ಬಿದ್ದಿರುವ ಜೊತೆಗೆ ಗ್ರಾಮದ ಹಲವು ಬಡಾವಣೆಗಳ ರಸ್ತೆಗಳ ಬಳಿ ಇರುವ ಚರಂಡಿಗಳು ತುಂಬಿ ಗಬ್ಬು ನಾರುತ್ತಿದೆ. ಇದರ ಜೊತೆಗೆ ಕಲುಷಿತ ನೀರು ರಸ್ತೆ ಮದ್ಯ ಭಾಗಗಳಲ್ಲಿ ಹರಿಯುವುದರಿಂದ ಸಾರ್ವಜನಿಕರು ಮೂಗುಮುಚ್ಚಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಇದರ ಬಗ್ಗೆ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೂ ಸಹ ಯಾವುದೇ  ಪ್ರಯೋಜನವಾಗಿಲ್ಲ. ನಂತರ ಇದೀಗ ಪಿಡಿಒಗೆ ಈ ಎಲ್ಲಾ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಮನದಟ್ಟು ಮಾಡಲಾಗಿದೆ ಎಂದರು.

ಈ ಸಂದರ್ಭ ಎಸ್‍ಡಿಪಿಐ ಪಧಾದಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News