ಅಂಗನವಾಡಿ ಮಕ್ಕಳಿಗೂ ಬರಲಿದೆ ಸಮವಸ್ತ್ರ

Update: 2018-09-26 14:29 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.26: ಶಾಲಾ ಮಕ್ಕಳಿಗೆ ನೀಡುವ ರೀತಿಯಲ್ಲಿಯೇ ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ನೀಡಲು ರಾಜ್ಯ ಸರಕಾರ ಮುಂದಾಗಿದ್ದು, ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಕ್ತ ತಯಾರಿ ನಡೆಸಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ.

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರದ ಜತೆಗೆ ಒಂದು ಜೊತೆ ಶೂ ಕೊಡುವ ಸಂಬಂಧ ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಯ ಒಪ್ಪಿಗೆ ಪಡೆದ ನಂತರ ಯೋಜನೆ ಜಾರಿ ಮಾಡಲಾಗುತ್ತದೆ. ಇನ್ನು ಮಲೆನಾಡು-ಕರಾವಳಿ ಭಾಗದ ಶಾಲಾ ಮಕ್ಕಳನ್ನು ಮಳೆಯಿಂದ ಕಾಪಾಡಲು ರೈನ್ ಕೊಟ್, ಸ್ವೆಟರ್, ಛತ್ರಿ ವಿತರಣೆ ಬಗ್ಗೆಯೂ ಇಲಾಖೆ ಪ್ರಸ್ತಾವನೆ ತಯಾರಿಸಿದೆ.

ಈ ಕುರಿತ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿರುವ ಇಲಾಖೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಅಂತಿಮ ಒಪ್ಪಿಗೆಗೆ ಕಾಯುತ್ತಿದೆ. ಆದರೆ, ಇನ್ನೂ ಯೋಜನೆಗೆ ಹೆಸರು ಅಂತಿಮಗೊಂಡಿಲ್ಲ. ಅಂತಿಮ ಒಪ್ಪಿಗೆ ಸಿಕ್ಕಿದ ನಂತರ ಎಲ್ಲವನ್ನೂ ತಿಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News