ಮೈಸೂರು: 'ಆಪರೇಷನ್ ಕಮಲ' ಖಂಡಿಸಿ ಪೊರಕೆ ಚಳವಳಿ

Update: 2018-09-26 15:10 GMT

ಮೈಸೂರು, ಸೆ.26: ಬಿಜೆಪಿಯ ಆಪರೇಷನ್ ಕಮಲ ಖಂಡಿಸಿ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಮಾನಿ ಬಳಗದ ವತಿಯಿಂದ ಪೊರಕೆ ಚಳವಳಿ ನಡೆಯಿತು.

ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಬುಧವಾರ ಜಮಾಯಿಸಿದ ಚಳುವಳಿಗಾರರು, ಪೊರಕೆ ಚಳವಳಿ ನಡೆಸಿ ಆಪರೇಷನ್ ಕಮಲವನ್ನು ಆಪರೇಷನ್ ಮುಳ್ಳುಗಳಿಗೆ ಹೋಲಿಸಿ ಅಣುಕು ಪ್ರದರ್ಶನ ನಡೆಸಿದರು. ಬಿಜೆಪಿ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ. ರೈತ ಸಾಲಮನ್ನಾ ಹಾಗೂ ಜನಪರ ಕೆಲಸ ಮಾಡುತ್ತಿರುವ ಸಿಎಂ ಕುಮಾರಸ್ವಾಮಿ ಸರ್ಕಾರ ಉರುಳಿಸಲು ಸಂಚು ನಡೆಸುತ್ತಿದೆ. ಅಧಿಕಾರ ಹಿಡಿಯುವ ದೃಷ್ಟಿಯಿಂದ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ ಎಂದು ಆರೋಪಿಸಿದರು. ಕೂಡಲೇ ಆಪರೇಷನ್ ಕಮಲವನ್ನು ನಿಲ್ಲಿಸದಿದ್ದರೆ ಬಿಜೆಪಿ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. 

ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎ.ಶಿವಶಂಕರ್, ಚಂದ್ರಶೇಖರ್, ಮಹೇಶ್, ಹರ್ಷಕುಮಾರ್, ಸಂದೀಪ್ ಸೇರಿದಂತೆ ಹಲವರು ಚಳುವಳಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News