ಆಮದು ಸುಂಕ ಹೆಚ್ಚಿಸಿದ ಸರಕಾರ: ಟಿವಿ, ಫ್ರಿಜ್ ಸೇರಿ ಇನ್ನು ಮುಂದೆ ಈ ವಸ್ತುಗಳು ದುಬಾರಿ

Update: 2018-09-26 15:28 GMT

ಹೊಸದಿಲ್ಲಿ, ಸೆ.26: ಅನಗತ್ಯ ಆಮದಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರವು ಕೆಲ ವಸ್ತುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿದೆ.

ಸುಮಾರು 19 ವಸ್ತುಗಳ ಬೆಲೆ ಸರಕಾರದ ಈ ಕ್ರಮದಿಂದ ಹೆಚ್ಚಲಿದೆ. ಟಿವಿ, ಫ್ರಿಜ್, ಆರ್ ಕಂಡಿಶನರ್, ಸ್ಪೀಕರ್ಸ್, ವಾಷಿಂಗ್ ಮೆಷಿನ್, ರೇಡಿಯಲ್ ಕಾರು ಟೈರುಗಳು, ಚಿನ್ನಾಭರಣಗಳು, ಅಡುಗೆ ಮನೆ ವಸ್ತುಗಳು, ಟ್ರಂಕ್ ಗಳು/ಸೂಟ್ ಕೇಸ್ ಗಳು, ಟ್ರಾವೆಲ್ ಬ್ಯಾಗ್ ಗಳು, ಮನೆ ಪರಿಕರಗಳಾದ ಶವರ್ ಬಾತ್, ಸಿಂಕ್, ಟೇಬಲ್ ವೇರ್, ಪ್ಲಾಸ್ಟಿಕ್ ಕಿಚನ್ ವೇರ್ ಗಳು, ಕಂಪ್ರೆಸರ್, ಫೂಟ್ ವೇರ್ಸ್, ನಾನ್ ಇಂಡಸ್ಟ್ರಿಯಲ್ ಡೈಮಂಡ್ ಮತ್ತು ಲ್ಯಾಬ್ ಗ್ರೋನ್ ಡೈಮಂಡ್ ದುಬಾರಿಯಾಗಲಿವೆ. ಇಂದು ಮಧ್ಯರಾತ್ರಿಯಿಂದ ಈ ಆದೇಶ ಜಾರಿಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News