ಪಿಯು ಕಾಲೇಜ್ ಕ್ರೀಡಾಕೂಟ: ಬಿಜಿಎಸ್ ಕಾಲೇಜಿನ 36 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
Update: 2018-09-27 17:23 IST
ಚಿಕ್ಕಮಗಳೂರು, ಸೆ.27: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪಿಯು ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಿಜಿಎಸ್ ಕಾಲೇಜಿನ 36 ವಿದ್ಯಾರ್ಥಿಗಳು ವಿಜೇತರಾಗುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರು ಕ್ರೀಡಾ ಕೂಟದ ಈಜು, ಹ್ಯಾಂಡ್‍ಬಾಲ್, ಟೆನ್ನಿಸ್, ವಾಲಿಬಾಲ್, ಕರಾಟೆ ಮತ್ತು ಕುಸ್ತಿಯಲ್ಲಿ ವಿಜೇತರಾದರೆ ಬಾಲಕಿಯರು ಹಾಕಿ, ಹ್ಯಾಂಡ್‍ಬಾಲ್, ಕರಾಟೆ ಮತ್ತು ಚೆಸ್ ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದರು. ಗುರುವಾರ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಉಪನ್ಯಾಸಕ ಎನ್.ಆರ್.ಸಂತೋಷ್, ದೈಹಿಕ ನಿರ್ದೇಶಕರಾದ ತಿರುಮಲೇಗೌಡ, ಕೆ.ಸಿ.ವಿಜಿತ್, ಎನ್.ಎಂ.ಮಂಜುನಾಥ್ ಉಪಸ್ಥಿತರಿದ್ದರು.