ಸೆ.28 ರಂದು ಔಷಧ ಅಂಗಡಿಗಳ ಬಂದ್ ಮುಷ್ಕರ: ಪರ್ಯಾಯ ಔಷಧಗಳ ಲಭ್ಯತೆಗೆ ಸರಕಾರದ ಕ್ರಮ

Update: 2018-09-27 16:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.27: ರಾಜ್ಯ ಔಷಧ ವ್ಯಾಪಾರಿಗಳ ಸಂಘ ಮತ್ತು ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್‌ನ್ ಅಸೋಶಿಯೇಶನ್‌ರವರು ಆನ್‌ಲೈನ್ ಮೂಲಕ ಔಷಧ ಮಾರಾಟದ ಬಗ್ಗೆ ಸೆ.28ರಂದು ಕೇಂದ್ರ ಸರಕಾರವು ಹೊರಡಿಸಿರುವ ಕರಡು ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನಾಳೆ 24 ಗಂಟೆಗಳ ಕಾಲ ಸಮಸ್ತ ರಾಜ್ಯದ ಔಷಧ ವ್ಯಾಪಾರಿಗಳು ಬಂದ್ ಮಾಡುವ ಮೂಲಕ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿರುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳ ಆವರಣದಲ್ಲಿರುವ, ಖಾಸಗಿ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ ಕಾರ್ಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವಂತಹ ಔಷಧ ಅಂಗಡಿಗಳು ಬಂದ್‌ನಿಂದ ವಿನಾಯಿತಿ ಹೊಂದಿದ್ದು, ಸೆ.28ರಂದು ಎಂದಿನಂತೆ ತೆರೆದಿರುತ್ತವೆ. 

ಸಾರ್ವಜನಿಕರು ಔಷಧಿಗಳಿಗಾಗಿ ಈ ಔಷಧಿ ಅಂಗಡಿಗಳನ್ನು ಸಂಪರ್ಕಿಸಬಹುದಾಗಿದೆ. ಔಷಧ ನಿಯಂತ್ರಣ ಇಲಾಖೆಯ, ರಾಜ್ಯದ ಎಲ್ಲಾ ಜಿಲ್ಲೆಯ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರಿಗೆ, ಸಾರ್ವಜನಿಕರಿಗೆ ಔಷಧ ಲಭ್ಯತೆಯ ಕುರಿತು ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ಎಲ್ಲಾ ಜಿಲ್ಲಾ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರುಗಳ ದೂರವಾಣಿ ಸಂಖ್ಯೆ ಮತ್ತು ಇತರೇ ವಿವರಗಳು ಇಲಾಖೆಯ ಅಂತರ್ಜಾಲ ತಾಣ http://drugs.kar.nic.in ನಲ್ಲಿ ಲಭ್ಯವಿದೆ. ಸೆ.28ರಂದು ಸಾರ್ವಜನಿಕರಿಗೆ ಔಷಧಗಳ ಲಭ್ಯತೆಯ ಬಗ್ಗೆ ಮಾಹಿತಿಯನ್ನು ನೀಡಲು ಔಷಧ ನಿಯಂತ್ರಣ ಇಲಾಖೆಯ ಈ ಕೆಳಕಂಡ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದಾಗಿದೆ.

ನೋಡಲ್ ಅಧಿಕಾರಿಗಳ ವಿವರ: ನಮೃತಾ ಹಳ್ಳೂರ, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-1(ಮೊಬೈಲ್‌ಸಂಖ್ಯೆ: 97396 58184, ದೂರವಾಣಿ ಸಂಖ್ಯೆ: 080-22341745), ಎಂ.ಸುರೇಶ್, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-2(ಮೊಬೈಲ್ ಸಂಖ್ಯೆ: 91411 66046, ದೂರವಾಣಿ ಸಂಖ್ಯೆ: 080-22341789).

ವೆಂಕಟೇಶ್.ಬಿ.ಆರ್, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-3(ಮೊಬೈಲ್ ಸಂಖ್ಯೆ: 99809 38139, ದೂರವಾಣಿ ಸಂಖ್ಯೆ: 080-22341742), ಗೋಣಿ ಫಕೀರಪ್ಪ, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-4(ದೂರವಾಣಿ ಸಂಖ್ಯೆ: 080-2341743), ಮಲ್ಲಿಕಾರ್ಜುನ ನಾಗೂರ, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-5(ಮೊಬೈಲ್ ಸಂಖ್ಯೆ: 94492 62039, ದೂರವಾಣಿ ಸಂಖ್ಯೆ:080-22341741).

ಉಮಾಕಾಂತ್ ಪಾಟೀಲ್, ಸಹಾಯಕ ಔಷಧ ನಿಯಂತ್ರಕರು-1, ಬೆಂಗಳೂರು ವೃತ್ತ-6(ಮೊಬೈಲ್ ಸಂಖ್ಯೆ: 93412 64210, ದೂರವಾಣಿ ಸಂಖ್ಯೆ:080- 2341740), ಜಿ.ವಿ.ನಾರಾಯಣ ರೆಡ್ಡಿ, ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ಗ್ರಾಮಾಂತರ ವೃತ್ತ(ಮೊಬೈಲ್ ಸಂಖ್ಯೆ: 98801 39146, ದೂರವಾಣಿ ಸಂಖ್ಯೆ: 080-2341805) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News