ಸಾಗರದಲ್ಲಿ ಇಳಿದ ವಿಮಾನ

Update: 2018-09-28 18:09 GMT

ಓಶಿಯಾನಿಯ ಖಂಡದ ಮಾರ್ಶಲ್ ಐಲ್ಯಾಂಡ್ ದೇಶದಲ್ಲಿ ಪ್ರಯಾಣಿಕ ವಿಮಾನವೊಂದು ಶುಕ್ರವಾರ ಬೆಳಗ್ಗೆ ಭೂಸ್ಪರ್ಶ ಮಾಡುವಾಗ ರನ್‌ವೇಯನ್ನು ದಾಟಿ ಸಮೀಪದ ಸಮುದ್ರಕ್ಕೆ ಹೊಂದಿಕೊಂಡ ಕೊಳವೊಂದರಲ್ಲಿ ಇಳಿದ ಘಟನೆ ವರದಿಯಾಗಿದೆ. ಮಧ್ಯ ಪೆಸಿಫಿಕ್ ಸಾಗರದಲ್ಲಿ ಹವಾಯಿ ಮತ್ತು ಫಿಲಿಪ್ಪೀನ್ಸ್‌ಗಳ ನಡುವೆ ಮಾರ್ಶಲ್ ದ್ವೀಪ ಸಮೂಹವಿದೆ. ಏರ್ ನಿಯುಗಿನಿ ಬೋಯಿಂಗ್ 737-800 ವಿಮಾನವು ಮೈಕ್ರೋನೇಶ್ಯದ ವೆನೊ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶಕ್ಕೆ ಯತ್ನಿಸುತ್ತಿತ್ತು. ಆದರೆ, ರನ್‌ವೇಯನ್ನು ಮೀರಿದ ವಿಮಾನವು ಸಮೀಪದ ಚೂಕ್ ಕಡಲ್ಕೊಳದಲ್ಲಿ ಇಳಿಯಿತು. ವಿಮಾನದ ಅರ್ಧ ಭಾಗ ನೀರಿನಿಂದ ಆವೃತವಾಯಿತು.ರಕ್ಷಣಾ ಕಾರ್ಯಾಚರಣೆಗಿಳಿದ ಸ್ಥಳೀಯರು ಕೆಲವೇ ನಿಮಿಷಗಳಲ್ಲಿ ಸಣ್ಣ ದೋಣಿಗಳ ಮೂಲಕ ವಿಮಾನವಿರುವ ಸ್ಥಳಕ್ಕೆ ಹೋಗಿ 35 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ವಿಮಾನದಿಂದ ಹೊರಗೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor