ಮಂಡ್ಯ: ಲಾಡ್ಜ್ ನಲ್ಲಿ ವ್ಯಕ್ತಿ ಆತ್ಮಹತ್ಯೆ
Update: 2018-09-28 23:42 IST
ಮಂಡ್ಯ, ಸೆ.28: ಮದ್ದೂರು ಪಟ್ಟಣದ ನೈದಿಲೆ ಲಾಡ್ಜ್ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಡೆತ್‍ನೋಟ್ ಬರೆದಿಟ್ಟು ಲಾಡ್ಜ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಶಿವಪುರ ನಿವಾಸಿ ಮನು(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಒಂದು ವರ್ಷದ ಹಿಂದೆ ನೈದಿಲ್ ಲಾಡ್ಜ್ ಮಾಲಕ ಚಾಕನಕೆರೆ ಗ್ರಾಮದ ನಾಗರಾಜು ಎಂಬುವರಿಂದ ಬಾಡಿಗೆಗೆ ಪಡೆದು ನಡೆಸುತ್ತಿದ್ದರು ಎನ್ನಲಾಗಿದೆ.
ಲಾಡ್ಜ್ ಮಾಲಕರು ಹಣ ನೀಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದರು. ನನ್ನ ಸಾವಿಗೆ ಮಾಲಕ ನಾಗರಾಜು ಕಾರಣ. ನನಗೆ ಬರಬೇಕಾದ 5 ಲಕ್ಷ ರೂ.ಗಳನ್ನು ನನ್ನ ತಾಯಿಗೆ ನೀಡಬೇಕು ಎಂದು ಮನು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.
ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.